ಕಪಿಲ್ ಶರ್ಮ ಜೊತೆ ಐದು ಹೀರೋಯಿನ್ಗಳ ಜೊತೆ ಡ್ಯುಯಟ್!

ಸೋಮವಾರ, 21 ಜುಲೈ 2014 (12:30 IST)
ಕಿರುತೆರೆಯಲ್ಲಿ ಅನೇಕರು ಸಾಕಷ್ಟು ಹೆಸರು ಮಾಡಿದ್ದಾರೆ. ತಮ್ಮ ಪ್ರತಿಭೆಯನ್ನು ಕೇವಲ ಕಿರುತೆರೆಗೆ ಮೀಸಲಾಗಿಡದೆ , ಹಿರಿತೆರೆಯತ್ತಲೂ ಹರಡುವ ಪ್ರಯತ್ನ ಮಾಡಿದ್ದಾರೆ ಗೆದ್ದಿದ್ದಾರೆ. ಅವರಲ್ಲಿ ಕಪಿಲ್ ಶರ್ಮ ಸಹ ಒಬ್ಬರು.

ಆರಂಭಿಕ ಹಂತದಲ್ಲಿ ನೂರರಲ್ಲಿ ಒಬ್ಬರಂತೆ ಕಿರುತೆರೆಗೆ ಎಂಟ್ರಿ ಆದ ಕಪಿಲ್ ಆನಂತರ ಕಾಮಿಡಿ ವಿತ್ ಕಪಿಲ್ ಎನ್ನುವ ಹಾಸ್ಯ ಕಾರ್ಯಕ್ರಮದ ಮುಖಾಂತರ ಹೆಚ್ಚು ಜನಪ್ರಿಯತೆ ಗಳಿಸಿದರು. ಅವರ ಈ ಪ್ರತಿಭೆ ಈಗ ಹಿರಿತೆರೆಯತ್ತ ಕರೆದೊಯ್ಯುತ್ತಿದೆ. ಈಗ  ಅಬ್ಬಾಸ್- ಮಸ್ತಾನಿ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಕಾಮಿಡಿ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. 
 
ಈ ಚಿತ್ರದಲ್ಲಿ ಹಾಸ್ಯವೇ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.ನಟ  ಗೋವಿಂದ ಅವರ ಟಿಪಿಕಲ್ ಸ್ಟೈಲ್ ಮುಖಾಂತರ ಕಪಿಲ್ ಅವರು ಗಮನ ಸೆಳೆಯಲಿದ್ದಾರೆ ಈ ಚಿತ್ರದಲ್ಲಿ. ಇದೊಂದು ಪರಿಪೂರ್ಣ ಮನೋರಂಜನಾ ಚಿತ್ರವಾಗುವುದರಲ್ಲೇ ಸಂಶಯವೇ ಇಲ್ಲ ಎಂದು ಹೇಳುತ್ತಿದೆ ಚಿತ್ರತಂಡ. ಕಪಿಲ್ ಶರ್ಮ ಜೊತೆ  ಆಗಿದ್ದಾರಂತೆ ಐದು ಮಂದಿ ಹೀರೋಯಿನ್ ಗಳು . ಈ ಚಿತ್ರದ ಶೂಟಿಂಗ್ ಇದೆ ವರ್ಷದ ನವೆಂಬರ್ ತಿಂಗಳಲ್ಲಿ ಆರಂಭ ಆಗುತ್ತದೆ ಎಂದು ಹೇಳಿದ್ದಾರೆ ಚಿತ್ರತಂಡ.  
 
ಈಗಾಗಲೇ ಅನೇಕ ಬಾರಿ ಕಪಿಲ್ ಅವರ ಜೊತೆ ಚರ್ಚೆ ಮಾಡಲಾಗಿದ್ದು, ಅವರ ಚಿತ್ರದ ನಟನೆಯ ಮುಂದಿನ ಘಟ್ಟದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನುವ ಸುದ್ದಿ ಹೇಳಿದ್ದಾರೆ ಅಬ್ಬಾಸ್. ಕಪಿಲ್ ಅವರು ಗೋವಿಂದ ಅವರು ನಟನೆಯಲ್ಲಿ ತೆರೆದಿಟ್ಟಿದ್ದ  ಮ್ಯಾಜಿಕ್ ಲೋಕವನ್ನು ಪುನರ್ ಸ್ಥಾಪಿಸುತ್ತಾರಾ ? ಸಮಯವೇ ಹೇಳಲಿದೆ !! 

ವೆಬ್ದುನಿಯಾವನ್ನು ಓದಿ