ಕರಣ್ ಜೋಹರ್ ಅವರು ತಮ್ಮ ಮುದ್ದು ಮಕ್ಕಳ ಬಗ್ಗೆ ಕಟ್ಟಿಕೊಂಡ ಕನಸು ಹೇಗಿದೆ ಗೊತ್ತಾ...?
ಮಂಗಳವಾರ, 9 ಜನವರಿ 2018 (07:06 IST)
ಮುಂಬೈ : ಬಾಲಿವುಡ್ ನ ಖ್ಯಾತ ನಿರ್ಮಾಪಕರಾದ ಕರಣ್ ಜೋಹರ್ ಅವರು ತಮ್ಮ ಮಕ್ಕಳನ್ನು ಸಿನಿಮಾ ಸೆಟ್ ನಲ್ಲಿ ಬೆಳೆಸುವುದಿಲ್ಲ ಎಂದು ಹೇಳಿದ್ದಾರೆ.
ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿರುವ ಕರಣ್ ಜೋಹರ್ ಅವರು ಒಳ್ಳೆಯ ತಂದೆ ಎನಿಸಿಕೊಂಡಿದ್ದಾರೆ. ತಮ್ಮ ಮಕ್ಕಳು ಮನೆಯಲ್ಲಿಯೇ ತಂದೆ ಹಾಗು ಅಜ್ಜಿಯ ಆಸರೆಯಲ್ಲೇ ಬೆಳೆಯಬೇಕು ಎಂಬುದು ತಮ್ಮಾಸೆ ಎಂದು ತಿಳಿದ್ದಾರೆ. ಎಲ್ಲಾ ಪೋಷಕರ ಹಾಗೆ ತಾನು ತಮ್ಮ ಮಕ್ಕಳನ್ನು ಕೆಲಸಮಾಡುವ ಸ್ಥಳಕ್ಕೆ ಕರೆದುಕೊಂಡು ಹೋಗಲಾರೆ. ಅವರು ಸಿನಿಮಾ ತಾರೆಯರ ಮಕ್ಕಳಂತೆ ಸಿನಿಮಾ ಸೆಟ್ ನಲ್ಲಿ ಬೆಳೆಯದೆ ತಮ್ಮದೇ ರೀತಿಯಲ್ಲಿ ತುಂಬಾ ಸ್ವತಂತ್ರವಾಗಿ ಬೆಳೆಯಬೇಕು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ