ಒಬ್ಬ ಮಹಿಳೆಯನ್ನು ನೋಡಿದರೆ ಇನ್ನೊಬ್ಬ ಮಹಿಳೆ ಹೊಟ್ಟೆಕಿಚ್ಚು ಪಡುವುದು ಯಾಕೆ ಗೊತ್ತಾ...?

ಶುಕ್ರವಾರ, 5 ಜನವರಿ 2018 (12:03 IST)
ಬೆಂಗಳೂರು : ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಯಾರೋ ಒಬ್ಬರ ಮೇಲೆ ದ್ವೇಷವಿದ್ದೆ ಇರುತ್ತದೆ. ಅವರನ್ನು ನೋಡಿದ ತಕ್ಷಣ ಜೆಲಸ್ ಉಂಟಾಗುತ್ತದೆ. ಆದರೆ ಒಬ್ಬ ಪುರುಷನನ್ನು ನೋಡಿದರೆ ಇನ್ನೊಬ್ಬ ಪುರುಷನಿಗೆ ಉಂಟಾಗುವ ಜೆಲಸ್ ಗಿಂತ ಒಬ್ಬ ಮಹಿಳೆಯನ್ನು ನೋಡಿದರೆ ಇನ್ನೊಬ್ಬ ಮಹಿಳೆಗಾಗುವ ಜೆಲಸ್ ಪ್ರಭಾವ ತುಂಬಾ ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ. 


ಮಹಿಳೆಯನ್ನು ನೋಡಿದರೆ ಇನ್ನೊಬ್ಬ ಮಹಿಳೆಗೆ ಜೆಲಸ್ ಉಂಟಾಗಲು ಹಲವು ಕಾರಣಗಳಿವೆ. ಇದಕ್ಕೆ ಅವರು ಕಾರಣವಾಗಿರುವುದಿಲ್ಲ ಅವರ ದೇಹದಲ್ಲಿರುವ ಹಾರ್ಮೊನುಗಳು ಈ ಕೆಲಸವನ್ನು ಮಾಡುತ್ತವೆ. ಅದು ಅವರ ಮೂಡನ್ನು ಬದಲಾಯಿಸುತ್ತದೆ. ಇದರಿಂದಾಗಿ ಇನ್ನೊಬ್ಬ ಸ್ತ್ರೀ ಬಗ್ಗೆ ದ್ವೇಷ ಹುಟ್ಟುತ್ತದೆ.


ಪುರುಷರ ಜೊತೆಗೆ ಕ್ಲೋಸ್ ಆಗಿರುವ ಹುಡುಗಿಯರನ್ನು ನೋಡಿದರೆ ಮತ್ತೊಬ್ಬ ಮಹಿಳೆಗೆ ಜೆಲಸ್ ಉಂಟಾಗುತ್ತದೆ. ಅದು ಕೂಡ ಹಾರ್ಮೋನ್ ಪ್ರಭಾವವೆ. ತಮಗೆ ಅಂತಹ ಸೌಲಭ್ಯ ಸಿಗಲಿಲ್ಲ ಎನ್ನುವ ಭಾವನೆ ಒಳಗಿರುತ್ತದೆ. ಅದು ಅವರಿಗೆ ತಿಳಿಯದೆ ಜೆಲಸ್ ರೂಪದಲ್ಲಿ ಹೊರಬರುತ್ತದೆ. ಮಹಿಳೆಯರ ಈ ಜೆಲಸ್ ಗೆ ಅವರ ದೇಹದಲ್ಲಿರುವ ಈಸ್ಟ್ರೋಜನ್ ಹಾರ್ಮೋನುಗಳೆ ಕಾರಣ. ಅವು ಮುಟ್ಟಿನ ಸಮಯದಲ್ಲಿ ಹೆಚ್ಚಾಗಿ ಉತ್ಪತ್ತಿಯಾಗುವುದರಿಂದ ಆ ಸಮಯದಲ್ಲಿ ಅವರಲ್ಲಿ ಜೆಲಸ್ ಭಾವನೆ  ಇನ್ನಷ್ಟು ಹೆಚ್ಚಾಗಿರುತ್ತದೆ ಎಂದು ಪ್ರಯೋಗಗಳ ಮೂಲಕ ತಿಳಿದುಬಂದಿದೆ.


ಒಬ್ಬ ಮಹಿಳೆಯ ಸೌಂದರ್ಯ, ಒಳ್ಳೆಯ ಗುಣಗಳು ಇನ್ನೊಬ್ಬ ಮಹಳೆಯ ಜೆಲಸ್ಸ್ ಗೆ ಕಾರಣವಾಗುತ್ತದೆ. ಹಾಗೆ ಅವರ ಮನೆಯಲ್ಲಿ ಲಭಿಸುವ ಸೌಲಭ್ಯ, ಗಂಡನ ಬೆಂಬಲ, ಒಳ್ಳೆಯ ಮಕ್ಕಳು, ಕುಟುಂಬ ಸದಸ್ಯರ ಪ್ರೀತಿ ಇವೆಲ್ಲವೂ ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆಯ ಮೇಲೆ ಜೆಲಸ್ ಉಂಟಾಗಲು ಕಾರಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ