ಬಿಳಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕರೀನಾ ಮತ್ತು ಅಮೃತಾ ಅರೋರಾ

ಗುರುವಾರ, 27 ಸೆಪ್ಟಂಬರ್ 2018 (15:47 IST)
ಆತ್ಮೀಯ ಸ್ನೇಹಿತರಾದ ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಇಬ್ಬರೂ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹಲವು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಮಂಗಳವಾರ, ಉತ್ತಮ ಸ್ನೇಹಿತರಾದ ಇಬ್ಬರೂ ಸಿಟಿಯಲ್ಲಿ ಒಟ್ಟಿಗೆ ಒಂದೇ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾದ ಔಟಿಂಗ್, ಡಿನ್ನರ್ ಅಥವಾ ಸಲೂನ್ ಡೇಟ್‌ಗಳೇ ಆಗಿರಲಿ ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡುವ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಕರೀನಾ ಹಾಗೂ ಅಮೃತಾ ಇಬ್ಬರೂ ಕರೀಶ್ಮಾ ಹಾಗೂ ಮಲೈಕಾ ಜೊತೆ ಯಾವಾಗಲೂ ಜಿಮ್ ಮತ್ತು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಕರೀನಾ ಹಾಗೂ ಅಮೃತಾ ಜಾಹೀರಾತಿನ ಚಿತ್ರೀಕರಣವೊಂದಕ್ಕಾಗಿ ಬಂದಿದ್ದು, ಇಬ್ಬರೂ ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಅಲ್ಲಿನ ಸುಂದರ ಚಿತ್ರಗಳನ್ನು ಅಮೃತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ಸ್ನೇಹಿತೆಯರ ನಡುವಿನ ಕೆಮೆಸ್ಟ್ರಿ ಉತ್ತಮವಾಗಿ ಕಂಡುಬಂದಿದೆ. ಇವರಿಬ್ಬರೂ ಸ್ನೇಹವನ್ನು ಮರುಹೆಸರಿಸಲು ಖಂಡಿತವಾಗಿಯೂ ಸೂಕ್ತವಾಗಿದ್ದಾರೆ.
 
ಕರೀನಾ ಇತ್ತೀಚೆಗೆ ಏಕ್ತಾ ಕಪೂರ್ ಅವರ ವೀರೆ ದಿ ವೆಡ್ಡಿಂಗ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಕರಣ ಜೋಹರ್ ಅವರ ಮುಂದಿನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ತಖ್ತ್ ಎನ್ನುವ ಶೀರ್ಷಿಕೆಯನ್ನು ನೀಡಿದ್ದು, ಇದರಲ್ಲಿ ರಣವೀರ್ ಸಿಂಗ್, ಅನಿಲ್ ಕಪೂರ್, ಭೂಮಿ ಪೆಡ್ನೇಕರ್, ವಿಕ್ಕಿ ಕೌಶಲ್ ಮತ್ತು ಜಾನ್ಹವಿ ಕಪೂರ್ ಸಂಭಾವ್ಯ ಕಲಾವಿದರಾಗಿದ್ದಾರೆ. ಕರಣ್ ಡ್ರಾಮಾ ಪ್ರೊಡಕ್ಷನ್ಸ್ ಅವರ ನಿರ್ಮಿತ ಗುಡ್ ನ್ಯೂಸ್‌ನಲ್ಲಿ ಕರೀನಾ ಅಕ್ಷಯ್ ಕುಮಾರ್ ಮತ್ತು ದಿಲ್ಜಿತ್ ದೊಸಾಂಜ್ ಜೊತೆ ಸಹ ಕಾಣಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ