ಲಕ್ಷ್ಮೀ ನಿವಾಸ ಧಾರವಾಹಿಯಿಂದ ಹೊರನಡೆದ ಹಿರಿಯ ನಟಿ ಅಂಜಲಿ: ಇನ್ನೊಬ್ಬ ಹಿರಿಯ ನಟಿಯೂ ಶೀಘ್ರವೇ ಔಟ್

Krishnaveni K

ಶುಕ್ರವಾರ, 26 ಸೆಪ್ಟಂಬರ್ 2025 (12:23 IST)
Photo Credit: Instagram
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿ ಬೇಡದ ಕಾರಣಕ್ಕೇ ಸುದ್ದಿಯಾಗುತ್ತಿದೆ. ಧಾರವಾಹಿಯಿಂದ ಹಿರಿಯ ನಟಿ ಅಂಜಲಿ ಹೊರಬಂದಿದ್ದು, ಈಗ ಮತ್ತೊಬ್ಬ ಹಿರಿಯ ನಟಿಯೂ ನಾನೂ ಶೀಘ್ರದಲ್ಲೇ ಹೊರಬರುವುದಾಗಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ನಟಿ ಅಂಜಲಿ ಸಂದರ್ಶನವೊಂದರಲ್ಲಿ ಆ ಧಾರವಾಹಿಯಲ್ಲಿ ನನ್ನ ಪಾತ್ರ ಹೇಳಿದ್ದೇ ಬೇರೆ, ಈಗ ಚಿತ್ರೀಕರಿಸುತ್ತಿರುವುದೇ ಬೇರೆ. ನನ್ನನ್ನು ವಿನಾಕಾರಣ ವಿಲನ್ ಪಾತ್ರ ಮಾಡಿಬಿಟ್ಟರು. ಇದರ ಬಗ್ಗೆ ನಾನು ಸಾಕಷ್ಟು ಬಾರಿ ಧಾರವಾಹಿ ತಂಡದವರ ಜೊತೆಗೆ ವಾಹಿನಿಯವರ ಜೊತೆ ಮಾತನಾಡಿದ್ದೇನೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಇದೀಗ ಇದ್ದಕ್ಕಿದ್ದಂತೆ ಧಾರವಾಹಿಯಿಂದ ಅಂಜಲಿ ಹೊರಬಂದಿದ್ದಾರೆ. ಇದರ ಬಗ್ಗೆ ಅದೇ ಧಾರವಾಹಿಯಲ್ಲಿ ಪಾತ್ರ ಮಾಡುತ್ತಿರುವ ಮತ್ತೊಬ್ಬ ಹಿರಿಯ ನಟಿ ವಿಜಯಲಕ್ಷ್ಮಿ ಸುಬ್ರಮಣಿ ಬಹಿರಂಗವಾಗಿ ಬೇಸರ ಹೊರಹಾಕಿದ್ದಾರೆ.

ಲಕ್ಷ್ಮೀ ನಿವಾಸ ಸೀರಿಯಲ್ ನಿಂದ ಹೊರನಡೆದ ನನ್ನ ಗೆಳತಿ ನಟಿ ಅಂಜಲಿ. ಅತಿಯಾದ ರಾಜಕೀಯ ನಿಜವಾದ ಕಲಾವಿದೆಯರಿಗೆ ಮನ್ನಣೆ, ಗೌರವ ಇಲ್ಲ. ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಾವಿಬ್ಬರೂ ಯಾವಕ ಕೊರತೆಯೂ ಮಾಡಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ್ದಾರೆ. ಹೀಗಾಗಿ ಸದ್ಯದಲ್ಲೇ ಅವರ ಪಾತ್ರವೂ ಕೊನೆಯಾಗುವುದು ಖಚಿತವಾಗಿದೆ. ಈ ನಡುವೆ ಧಾರವಾಹಿ ತಂಡದ ಬಗ್ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ