ಉಡ್ತಾ ಪಂಜಾಬ್ ನಲ್ಲಿ ವೈದ್ಯೆಯಾಗಿ ಕಾಣಿಸಿಕೊಳ್ತಿದ್ದಾರೆ ಕರೀನಾ

ಸೋಮವಾರ, 29 ಫೆಬ್ರವರಿ 2016 (11:06 IST)
ನಟಿ ಕರೀನಾ ಕಪೂರ್ ಅವರಿಗೆ ವೈದ್ಯ ಪಾತ್ರ ಇಷ್ಟವೊ ಇಲ್ಲಾ ನಿರ್ದೇಶಕರುಗಳಿಗೆ ಕರೀನಾ ಅವರನ್ನು ವೈದ್ಯ ಪಾತ್ರದಲ್ಲಿ ತೋರಿಸೋದು ಇಷ್ಟವೊ ಗೊತ್ತಿಲ್ಲ. ಈ ಹಿಂದೆ ತೆರೆ ಕಂಡ ಎಜೆಂಟ್ ವಿನೋದ್,ತೀ ಈಡಿಯೇಟ್ಸ್,ಮುಂತಾದ ಸಿನಿಮಾಗಳಲ್ಲಿ ಬೆಬೋ ವೈದ್ಯೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಡಾಕ್ಟರ್ ಆಗಿ ತೆರೆ ಮೇಲೆ ಬರುತ್ತಿದ್ದಾರೆ ಕರೀನಾ.
 
ಉಡ್ತಾ ಪಂಜಾಬ್ ಸಿನಿಮಾದಲ್ಲಿ ಕರೀನಾ ಮತ್ತೊಮ್ಮೆ ಡಾಕ್ಟರ್ ಆಗಿ  ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಮೂರು ನಾಲ್ಕು ಸಿನಿಮಾಗಳಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡಿರುವ ಕರೀನಾ ಉಡ್ತಾ ಪಂಜಾಬ್ ಸಿನಿಮಾದಲ್ಲಿ ಮತ್ತೆ ವೈದ್ಯೆಯಾಗಿದ್ದಾರೆ.ಥ್ರಿಲ್ಲರ್ ಸಿನಿಮಾವಾಗಿರುವ ಉಡ್ತಾ ಪಂಜಾಬ್ ನಲ್ಲಿ ನನ್ನದು ಸುಂಬ ಸಿಂಪಲ್ ಹಾಗೇ ಉತ್ತಮವಾದ ಪಾತ್ರ ಅಂತಾ ಅವರು ಹೇಳಿದ್ದಾರೆ.ಅಲ್ಲದೇ ಇದುವರೆಗೂ ನಾನು ಮಾಡಿರುವ ಪಾತ್ರಗಳಿಗಿಂತ ಈ ಸಿನಿಮಾ ತುಂಬಾನೇ ಢಿಪರೆಂಟ್ ಆಗಿದೆ ಅಂದಿದ್ದಾರೆ ಬೆಬೋ.
 
ಸದ್ಯ ಕರೀನಾ ಅಭಿನಯಿಸುತ್ತಿರುವ ಕೀ ಆಂಡ್ ಕ, ಹಾಗೇ ಉಡ್ತಾ ಪಂಜಾಬ್ ಸಿನಿಮಾ ಎಲ್ಲವೂ ವಿಭಿನ್ನವಾದ ಕಥಾ ಹಂದರವನ್ನು ಹೊಂದಿರುವ ಚಿತ್ರಗಳು. ಕರೀನಾ ಕೂಡ ಅದೇ ರೀತಿ ಸಿನಿಮಾದಲ್ಲಿ ಢಿಪರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.ಉಡ್ತಾ ಪಂಜಾಬ್ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೇ ಶಾಹೀದ್ ಕಪೂರ್ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ