ಕೊರೋನಾ ಸಮಯದಲ್ಲಿ ಕರೀನಾ ಕಪೂರ್ ಮಾಡಿದ್ದೇನು ಗೊತ್ತಾ?

ಬುಧವಾರ, 18 ಮಾರ್ಚ್ 2020 (11:35 IST)
ಮುಂಬೈ: ಕೊರೋನಾವೈರಸ್ ಹರಡುವಿಕೆಯಿಂದಾಗಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಚಿತ್ರತಾರೆಯರೂ ಸುಮ್ಮನೇ ಮನೆಯಲ್ಲಿ ಕೂರುವಂತಾಗಿದೆ. ಇದಕ್ಕೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಕೂಡಾ ಹೊರತಲ್ಲ.


ಕರೀನಾ ಸ್ವತಃ ಕೈಯಾರೆ ಕ್ಯಾರೆಟ್ ಹಲ್ವಾ ಮಾಡಿ ಸಮಯ ಕಳೆದಿರುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡು ಖುಷಿಪಟ್ಟಿದ್ದಾರೆ.

ಕ್ಯಾರೆಟ್ ಹಲ್ವಾ ಚಪ್ಪರಿಸಿಕೊಂಡು ತಿನ್ನುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಕರೀನಾ ಕರೋನಾ ಬಗ್ಗೆಯೂ ಜಾಗೃತರಾಗಿರುವಂತೆ ಕರೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ