ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

Sampriya

ಸೋಮವಾರ, 18 ಆಗಸ್ಟ್ 2025 (18:25 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ2 ಆರೋಪಿಯಾಗಿರುವ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ವಿಚಾರ ಸಂಬಂಧ ಇದೀಗ ಸಿಸಿಎಚ್‌ 64ರಲ್ಲಿ ವಿಚಾರಣೆ ನಡೆದಿದೆ. ಇದೀಗ ಮುಂದಿನ ವಿಚಾರಣೆಯನ್ನು ಆ.23ಕ್ಕೆ ಮುಂದೂಡಲಾಗಿದೆ. 

ವಿಚಾರಣೆ ನಡೆಸಿದ ನ್ಯಾಯಾಧೀಶರು, ದರ್ಶನ್ ಪರ ವಕೀಲರಿಗೆ ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಮುಂದಿನ 23ಕ್ಕೆ ವಿಚಾರಣೆಯನ್ನು ಮುಂದೂಡಿದರು. 

ಸರ್ಕಾರ ಪರ ವಕೀಲರು ವಾದ ಮಾಡಿ, ಕೊಲೆ ಪ್ರಕರಣದ ಆರೋಪಿಗಳು ಈ ಹಿಂದೆ ಯಾವಾ ಜೈಲಿನಲ್ಲಿದ್ರೂ ಅದೇ ಜೈಲಿಗೆ ಕಳುಹಿಸಬೇಕೆಂದು ಅರ್ಜಿ ಸಲ್ಲಿಸಿದರು. 

ಆದರೆ ಜಾಮೀನು ರದ್ದಾದ ದಿನವೇ ದರ್ಶನ್ ಪರ ವಕೀಲರು ಒಂದು ವೇಳೆ ಬಳ್ಳಾರಿಗೆ ಶಿಫ್ಟ್ ಮಾಡುವುದಾದರೆ ನಮ್ಮ ವಾದವನ್ನು ಅಲಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದರು. 

ಮುಂದಿನ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರ ವಾದ ತುಂಬಾನೇ ಮುಖ್ಯವಾಗಲಿದ್ದು, ಇದರಲ್ಲಿ ದರ್ಶನ್‌ಗೆ ಪರಪ್ಪನಾ ಅಗ್ರಹಾರನಾ ಅಥವಾ ಬಲ್ಳಾರಿ ಜೈಲಾ ಎಂಬ ಮಹತ್ವದ ಆದೇಶ ಹೊರಬೀಳಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ