ಕರೀನಾ ಹಾಗೂ ಸೈಫ್ ಗೆ ಗಂಡು ಮಗುವಾಗುತ್ತಾ?

ಗುರುವಾರ, 14 ಜುಲೈ 2016 (10:38 IST)
ಮೊನ್ನೆ ತಾನೇ ನಚ ಸೈಫ್ ಆಲಿಖಾನ್ ಅವರು ನಾನು ಹಾಗೂ ಕರೀನಾ ನಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ ಅನ್ನೋ ಸಂತಸದ ಸುದ್ದಿಯನ್ನು ಬಹಿರಂಗ ಮಾಡಿದ್ರು. ಅಲ್ಲದೇ ಮಗು ಬರೋ ಖುಷಿಯಲ್ಲೇ ಅವರಿಬ್ಬರು ಹೊಸ ಮನೆಗೆ ಕೂಡ ಶಿಫ್ಟ್ ಆಗಿದ್ದರು. ಇದೀಗ ದಂಪತಿಗೆ ಯಾವ ಮಗುವಾಗುತ್ತೆ ಅನ್ನೋ ಕುರಿತು ಚರ್ಚೆ ಶುರುವಾಗಿದೆ.

ಸದ್ಯ ತಾಯಿಯಾಗುತ್ತಿರುವ ಖುಷಿಯಲ್ಲಿರುವ ಕರೀನಾ, ಮೊನ್ನೆ ಪಚತಿ ಸೈಫ್ ಆಲಿಖಾನ್ ಅವರೊಂದಿಗೆ ಲಂಡನ್ ಗೆ ತೆರಳಿ ಅಲ್ಲಿ ವೈದರಿಂದ ಪರೀಕ್ಷೆ ಮಾಡಿಸಿಕೊಂಡಿದ್ದಾರಂತೆ. ಈ ವೇಳೆ ವೈದ್.ರು ನಿಮಗೆ ಗಂಡು ಮಗುವಾಗುತ್ತೆ ಅಂತಾ ಹೇಳಿದ್ದಾರಂತೆ. ಅಂದ್ಹಾಗೆ ಭಾರತದಲ್ಲಿ ಲಿಂಗ ಪತ್ತೆ ಮಾಡಿಸೋದು ಅಪರಾಧ.ಆದ್ರೆ ಕರೀನಾ ದಂಪತಿ ಲಂಡನ್ ನಲ್ಲಿ ಮಗುವಿನ ಲಿಂಗಪತ್ತೆ ಮಾಡಿಸಿರೋದು ಈ ಹೊಸ ವಿವಾದಕ್ಕೆ ಕಾರಣವಾಗುತ್ತಾ ಅನ್ನೋ ಸಂದೇಹ ಕಾಡುತ್ತಿದೆ.ಆದ್ರೆ  ಈ ತಾರಾ ದಂಪತಿ ಮಾತ್ರ ಈವರೆಗೂ ಈ ಬಗ್ಗೆ ತುಟಿ ಪಿಟಿಕ್ ಅಂದಿಲ್ಲ.

 ಇನ್ನು ಮೊನ್ನೆ ತಾನೇ ನಟಿ ಜೆನಿಲಿಯಾ ಎರಡನೇ ಬಾರಿಗೆ ಗಂಡು ಮಗುವಿನ ತಾಯಿಯಾಗಿದ್ದರು. ರಾಣಿ ಮುಖರ್ಜಿ ಹೆಣ್ಣು ಮಗುವಿನ ತಾಯಿಯಾಗಿದ್ದರು. ಇದೀಗ ಕರೀನಾ ಅವರು ತಾಯಿಯಾಗುತ್ತಿರೋದು ಅವರ ಕುಟುಂಬದಲ್ಲಿ ಸಂತಸ ಮೂಡಿಸಿದೆ.ಆದ್ರೆ ಕರೀನಾ ನಿಜವಾಗಿಯೂ ಗಂಡು ಮಗುವಿನ ತಾಯಿಯಾಗ್ತಾರಾ ಅನ್ನೋದನ್ನು ಕಾದು ನೋಡ್ಬೇಕು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ