ಮರು ಮದುವೆಯಾಗಲಿದ್ದಾರಾ ನಟಿ ಕರೀಷ್ಮಾ ಕಪೂರ್?
ಈ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ವೇಳೆ ಅಭಿಮಾನಿಯೊಬ್ಬರು ಕರೀಷ್ಮಾರನ್ನು ಕೇಳಿದ್ದರು. ಇದಕ್ಕೆ ಕರೀಷ್ಮಾ ತಕ್ಕ ಉತ್ತರ ಕೊಟ್ಟಿದ್ದಾರೆ.
ಯೋಚನೆ ಮಾಡುವಂತಹ ಇಮೋಜಿ ಪ್ರಕಟಿಸಿ ಸಂದರ್ಭಕ್ಕೆ ಹೊಂದಿಕೊಂಡು ಇರುತ್ತದೆ ಎಂದು ಬರೆದುಕೊಂಡಿದ್ದಾರೆ. 2003 ರಲ್ಲಿ ಸಂಜಯ್ ಕಪೂರ್ ಜೊತೆಗೆ ಮದುವೆಯಾಗಿದ್ದ ಕರೀಷ್ಮಾ ಇಬ್ಬರು ಮಕ್ಕಳಾದ ಬಳಿಕ ಪತಿ ಸಂಜಯ್ ಕಪೂರ್ ರಿಂದ 2014 ರಲ್ಲಿ ಪ್ರತ್ಯೇಕವಾಗಿದ್ದರು.