ಕಿಚ್ಚ ಸುದೀಪ್-ಅಜಯ್ ದೇವಗನ್ ಹಿಂದಿ ವಿವಾದ: ಕಿಚ್ಚನಿಗೆ ಬೆಂಬಲ ಕೊಟ್ಟ ಸೆಲೆಬ್ರಿಟಿಗಳು

ಗುರುವಾರ, 28 ಏಪ್ರಿಲ್ 2022 (08:40 IST)
ಬೆಂಗಳೂರು: ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ಶುರುವಾಗಿತ್ತು. ಇದಕ್ಕೆ ಸುದೀಪ್ ಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಬೆಂಬಲ ಕೊಟ್ಟಿದ್ದಾರೆ.

ಅಜಯ್ ದೇವಗನ್ ಕಿಚ್ಚ ಸುದೀಪ್ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ ನೀವು ಯಾಕೆ ಹಿಂದಿಯಲ್ಲಿ ಡಬ್ ಮಾಡ್ತೀರಿ? ಹಿಂದಿ ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆ ಎಂದಿದ್ದರು. ಇದಕ್ಕೆ ಸುದೀಪ್ ನಾನು ಕನ್ನಡದಲ್ಲಿಯೇ ಇದಕ್ಕೆ ಉತ್ತರ ಕೊಟ್ಟಿದ್ದರೆ ಹೇಗಿರುತ್ತಿತ್ತು ಎಂದು ತಿರುಗೇಟು ನೀಡಿದ್ದರು.

ಇವರಿಬ್ಬರ ಟ್ವೀಟ್ ವಾರ್ ಗೆ ಈಗ ಸೆಲೆಬ್ರಿಟಿಗಳು, ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್‍.ಡಿ. ಕುಮಾರಸ್ವಾಮಿ ಸುದೀಪ್ ಹೇಳಿಕೆಯನ್ನು ಬೆಂಬಲಿಸಿದ್ದು, ಅಜಯ್ ದೇವಗನ್ ಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನು, ಸ್ಯಾಂಡಲ್ ವುಡ್ ನಟಿ ರಮ್ಯಾ, ನೀನಾಸಂ ಸತೀಶ್, ಶ್ರೀನಗರ ಕಿಟ್ಟಿ ಮುಂತಾದ ಸ್ಯಾಂಡಲ್ ವುಡ್ ತಾರೆಯರು ಸುದೀಪ್ ಟ್ವೀಟ್ ಬೆಂಬಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ