ಇವತ್ತು ಥಿಯೇಟರ್ ಅಂಗಳಕ್ಕೆ ಬರುತ್ತಿದೆ ಕತ್ರೀನಾ ಹಾಗೂ ಆದಿತ್ಯಾರ ಪ್ರೇಮಕಾವ್ಯ

ಶುಕ್ರವಾರ, 12 ಫೆಬ್ರವರಿ 2016 (11:27 IST)
ಕತ್ರೀನಾ ಕೈಫ್ ಹಾಗೂ ಆದಿತ್ಯಾ ರಾಯ್ ಕಪೂರ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಸಿನಿಮಾ ಫಿತೂರ್. ಕತ್ರೀನಾ ಕೈಫ್ ಹಾಗೂ ಆದಿತ್ಯಾ ರಾಯ್ ಕಪೂರ್ ಇಬ್ಬರ ವೃತ್ತಿ ಬದುಕಿನ ವಿಭಿನ್ನ ಸಿನಿಮಾವಾಗಿರುವ ಫಿತೂರ್ ಇವತ್ತು ವಿಶ್ವದೆಲ್ಲೆಡೆ ರಿಲೀಸ್ ಆಗಿದೆ.

ಸೆಟ್ಟೇರಿದಾಗಿನಿಂದ ನಾನಾ ಕಾರಣಕ್ಕೆ ಸುದ್ದಿಯಾಗುತ್ತಲೇ ಬಂದಿರುವ ಈ ಸಿನಿಮಾ. ಕತ್ರೀನಾ ಕೈಫ್ ಅಂತೂ ಇದುವರೆಗೂ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇನ್ನು ತನ್ನ ವೃತ್ತಿ ಜೀವನದ ವಿಭಿನ್ನ ಸಿನಿಮಾ ಅಂತಾ ಕ್ಯಾಟ್ ಈ ಹಿಂದೆಯೇ ಹೇಳಿಕೊಂಡಿದ್ದರು. ಅಲ್ಲದೇ ಇದು ನಾನು ಎಂದಿಗೂ ಮರೆಯಲಾರದ ಪಾತ್ರ ಅಂತಾ ಅವರು ಹೇಳಿದ್ದಾರೆ. ಹಾಗಾಗಿ ಈ ಪಾತ್ರದ ಬಗ್ಗೆ ನಾನು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಅಂತಾ ಕ್ಯಾಟ್ ಹೇಳಿದ್ದಾರೆ.
 
ಫಿತೂರ್ ಸಿನಿಮಾವನ್ನು ಅಭಿಷೇಕ್ ಕಪೂರ್ ನಿರ್ದೇಶನ ಮಾಡಿದ್ದಾರೆ. ಫಿತೂರ್ ಸಿನಿಮಾದಲ್ಲಿ ಕತ್ರೀನಾ ಹಾಗೂ ಆದಿತ್ಯಾ ರಾಯ್ ಕಪೂರ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಟಬು ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರೇಮಿಗಳ ದಿನದ ಉಡುಗೊರೆಯಾಗಿ ಬಂದಿರುವ ಈ ಸಿನಿಮಾಗೇ ಪ್ರೇಕ್ಷಕರು ಎಷ್ಟು ಅಂಕ ನೀಡುತ್ತಾರೆ ಅಂತಾ ಕಾದು ನೋಡ್ಬೇಕು.

ವೆಬ್ದುನಿಯಾವನ್ನು ಓದಿ