ಲಂಡನ್ ಮ್ಯೂಸಿಯಂನಲ್ಲಿ ಕತ್ರಿನಾ ಕೈಫ್ ಮೇಣದ ಪ್ರತಿಮೆ

ಶನಿವಾರ, 28 ಮಾರ್ಚ್ 2015 (16:15 IST)
ಲಂಡನ್‌ನ ಮೇಡಮ್ ಟುಸ್ಸಾಡ್‌ ಮ್ಯೂಸಿಯಂನಲ್ಲಿರುವ ಬಾಲಿವುಡ್‌ ಮಹಾನ್ ವ್ಯಕ್ತಿಗಳ ಮೇಣದ ಪ್ರತಿಮೆಗಳ ಸಾಲಿಗೆ ಕತ್ರಿನಾ ಕೈಫ್ ಪ್ರತಿಮೆಯೂ ಸೇರ್ಪಡೆಯಾಗಿದೆ. 
 
ಸ್ವತ: ಕೈಫ್ ಮೇಣದ ಮೂರ್ತಿಯನ್ನು ಅನಾವರಣಗೊಳಿಸಿದರು. ಆ ಮೂಲಕ ಪ್ರಸಿದ್ಧ ಮ್ಯೂಸಿಯಂನ ಭಾಗವಾದರು. ಟುಸ್ಸಾಡ್ ತನ್ನ "15 ವರ್ಷಗಳ ಬಾಲಿವುಡ್" ಆಚರಣೆಯ ಸಂದರ್ಭದಲ್ಲಿ ಕೈಫ್ ಪ್ರತಿಮೆಯನ್ನು ಸ್ಥಾಪಿಸಿದೆ. ತನ್ನ ಮೇಣದ ಮಾದರಿ ಜೊತೆ ಮುಖಾಮುಖಿಯಾಗಿ ಹೊರ ಬಂದ ನಂತರ ಮಾತನಾಡುತ್ತಿದ್ದ ಕೈಫ್, "ಇದೊಂದು ಅದ್ಭುತ, ಇದು ನಿಜವಾಗಿಯೂ ನನ್ನಂತಿಲ್ಲವೇ"?, ಎಂದರು. 
 
ಈ ಬಾರಿ ತಾನು ಸ್ಥಾಪಿಸ ಬಯಸುವ ಮೇಣದ ಪ್ರತಿಮೆಗೆ ಬಾಲಿವುಡ್ ಸ್ಟಾರ್‌ಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಟುಸ್ಸಾಡ್ ಕಳೆದ ವರ್ಷ ತನ್ನ ವೆಬ್‌ಸೈಟ್‌ ಮತ್ತು ಪಂಜಾಬಿನ ರೇಡಿಯೋ ಸಹಯೋಗದೊಂದಿಗೆ ಸಮೀಕ್ಷೆ ನಡೆಸಿತ್ತು. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆಯವರ ಜತೆಯಲ್ಲಿ ತೀವ್ರ ಸ್ಪರ್ಧೆಯಿಂದ ಕೂಡಿದ ಸಮೀಕ್ಷೆಯಲ್ಲಿ ಕೊನೆಗೂ ಬ್ರಿಟಿಷ್ ತಾಯಿ ಮತ್ತು ಕಾಶ್ಮೀರಿ ತಂದೆಯ ಮಗಳಾದ ಕತ್ರಿನಾ ಜಯಗಳಿಸಿದ್ದರು. 
 
ಇದುವರೆಗೂ ಟುಸ್ಸಾಡ್ ಮ್ಯೂಸಿಯಂನಲ್ಲಿ ಅಮಿತಾಭ್ ಬಚ್ಚನ್ (2000), ಐಶ್ವರ್ಯ ರೈ (2004), ಶಾರುಖ್ ಖಾನ್ (2007), ಸಲ್ಮಾನ್ ಖಾನ್ (2008), ಹೃತಿಕ್ ರೋಶನ್ (2011) ಮತ್ತು ಮಾಧುರಿ ದಿಕ್ಷಿತ್ (2012) ಪ್ರತಿಮೆಗಳು ಸ್ಥಾಪಿಸಲ್ಪಟ್ಟಿದ್ದು ಕತ್ರಿನಾ ಈ ಗೌರವ ಪಡೆದ 7 ನೇ ಬಾಲಿವುಡ್ ಸ್ಟಾರ್ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ