ಉಡ್ತಾ ಪಂಜಾಬ್ 'ಬ್ಯೂಟಿಫುಲ್' ಮೂವೀ..ಲೀಕ್ ಆಗಿದ್ದು ದುರಂತ: ಕತ್ರೀನಾ ಕೈಫ್

ಶುಕ್ರವಾರ, 17 ಜೂನ್ 2016 (16:42 IST)
ಬಾಲಿವುಡ್ ನಟಿ ಕತ್ರೀನಾ ಕೈಫ್ ಉಡ್ತಾ ಪಂಜಾಬ್ ಚಿತ್ರ ಸುಂದರವಾಗಿರುವ ಚಿತ್ರ. ಆದ್ರೆ ಆನ್‌ಲೈನ್‌ನಲ್ಲಿ ಚಿತ್ರ ಲೀಕ್ ಆಗಿದ್ದು ದುರಂತ ಎಂದು ನಟಿ ಕ್ಯಾಟ್ ತಿಳಿಸಿದ್ದಾಳೆ. 32 ವರ್ಷದ ನಟಿ ಕತ್ರೀನಾ ಕೈಫ್ ನಿನ್ನೆ ಸಂಜೆ ಆಯೋಜಿಸಿದ್ದ ಸ್ಪೆಷಲ್ ಸ್ಕ್ರೀನ್‌ನಲ್ಲಿ ಚಿತ್ರ ವೀಕ್ಷಿಸಿದ್ದಾರೆ.


ಈ ಚಿತ್ರದಲ್ಲಿ ಶಾಹಿದ್ ಕಪೂರ್ ಹಾಗೂ ಆಲಿಯಾ ಭಟ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇದೊಂದು ನಿಜಕ್ಕೂ ವಿಭಿನ್ನವಾದ ಚಿತ್ರ. ಶಾಹಿದ್ ಹಾಗೂ ಆಲಿಯಾ ನಂಬಲು ಸಾಧ್ಯವಾಗದ ಕೆಲಸ ನಿರ್ವಹಿಸಿದ್ದಾರೆ ಎಂದು ಕ್ಯಾಟ್ ತಿಳಿಸಿದ್ದಾಳೆ. 
 
ಆಲಿಯಾ ಭಟ್ ಅದ್ಫುತವಾಗಿ ನಟನೆ ಮಾಡಿದ್ದಾರೆ ಎಂದ ಅವರು, ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು ದುರಂತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಪ್ರೇಕ್ಷಕರು ಥಿಯೇಟರ್‌ಗೆ ಹೋಗಿ ಮೂವೀ ನೋಡುವಂತೆ ಅಮಿರ್ ಖಾನ್, ಕರಣ್ ಜೋಹರ್,ಅನುರಾಗ್ ಕಶ್ಯಪ್ ತಿಳಿಸಿದ್ದಾರೆ.

ತುಂಡುಡುಗೆ  ಮೂಲಕ ಅಪಾರ  ಅಭಿಮಾನಿಗಳ  ಮನಸ್ಸು ಕದ್ದ ಕತ್ರೀನಾ ಕೈಫ್ ಶಾರೂಖ್ ಖಾನ್ ಜತೆಗೆ ಮತ್ತೆ ರೀಲ್ ಲೈಫಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.  ಈ  ಹಿಂದೆ ಇಬ್ಬರು  'ಜಬ್ ತಕ್ ಹೇ ಜಾನ್' ಚಿತ್ರದಲ್ಲಿ  ಮೋಡಿ  ಮಾಡಿತ್ತು...ಈ  ಹಿನ್ನಲೆಯಲ್ಲಿ  ಇದೇ ಜೋಡಿಯನ್ನು ಮತ್ತೆ ತೆರೆ ಮೇಲೆ ತರಲು ಯೋಚಿಸಲಾಗುತ್ತಿದೆ ಎನ್ನಲಾಗುತ್ತಿದೆ.
 
ಇನ್ನೂ ಕೆಲ ಮೂಲಗಳ ಪ್ರಕಾರ ಕತ್ರೀನಾ ಕೈಫ್ ಮನ್ನತ್‌ನಲ್ಲಿರುವ ಶಾರೂಖ್ ನಿವಾಸಕ್ಕೆ  ತೆರಳಿ ಅಲ್ಲಿ  ಕೆಲ  ಮಾತುಕತೆ ನಡೆಸಿದ್ದಾರಂತೆ.
 
ಮುಂಬರುವ ಸಿನಿಮಾದ ಕುರಿತು ಇಬ್ಬರು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.ಈ ಚಿತ್ರದಲ್ಲಿ ಕರ್ತೀನಾ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಖಚಿತವಾದ್ದಂತೆ ಎನ್ನಲಾಗುತ್ತಿದೆ..ಆದ್ರೆ ಸದ್ಯಕ್ಕೆ ಇವರಿಬ್ಬರು ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ