ಹಲವು ಬಾರಿ ಹಣೆಗೆ ಸಿಂಧೂರ ಇಟ್ಟು ಕಾಣಿಸಿಕೊಂಡ ಖ್ಯಾತ ತಾರೆ ಕತ್ರೀನಾ

ಬುಧವಾರ, 27 ಜುಲೈ 2016 (10:46 IST)
ಬಾಲಿವುಡ್‌ನ ಖ್ಯಾತ ತಾರೆ ಕತ್ರೀನಾ ಕೈಫ್ ರೀಲ್ ಲೈಫಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್‌ಲ್ಲೂ ತಮ್ಮ ಹಣೆಗೆ ಹಲವು ಬಾರಿ ಸಿಂಧೂರು ಇಟ್ಟಿದ್ದಾರೆ. ಹಲವು ಕಡೆಗಳಲ್ಲಿ ಹಣೆಗೆ ತಿಲಕವಿಟ್ಟು ಕಾಣಿಸಿಕೊಂಡಿದ್ದರು. ಆದ್ರೆ ಇದೀಗ ಮತ್ತೆ ಸಿಂಧೂರ್ ವಿಡುವುದರ ಮೂಲಕ ಕಾಣಿಸಿಕೊಂಡಿದ್ದಾರೆ. ಅದು ರಿಯಲ್ ಲೈಫಲ್ಲಿ ಅಲ್ಲ.. ರೀಲ್ ಲೈಫಲ್ಲಿ.

 
ಅವರ ಮುಂಬರುವ ಚಿತ್ರ 'ಕಾಲಾ ಚಾಸ್ಮಾ' ಚಿತ್ರದಲ್ಲಿ ಕತ್ರೀನಾ ಚಿತ್ರದ ಹಾಡಿನಲ್ಲಿ ಸಿಂಧೂರವಿಟ್ಟು ಮಿಂಚಿದ್ದಾರೆ. ಇದು ಕ್ಯಾಟ್ ಅಭಿಮಾನಿಗಳು ಕುತೂಹಲ ಮೂಡಿಸುತ್ತಿದೆ. 
 
ಅಂದಹಾಗೆ ಕತ್ರೀನಾ ಮೊದಲ ಬಾರಿಗೆ ಸಿಂಧೂರನಲ್ಲಿ ಕಾಣಿಸಿಕೊಂಡಿಲ್ಲ. 2012ರಲ್ಲಿ ತಮ್ಮ ಹಣೆ ಮೇಲೆ ಸಿಂಧೂರ ತಿಲಕವಿಟ್ಟು ಕತ್ರೀನಾ ರಿಯಲ್ ಲೈಫ್‌ಲ್ಲಿ ಕಾಣಿಸಿಕೊಂಡಿದ್ದರು. ಇದು ಸಾಕಷ್ಟು ಸುದ್ದಿ ಮಾಡಿತ್ತು. ಇದನ್ನು ನೋಡಿದ ಪ್ರತಿಯೊಬ್ಬರು ಕತ್ರೀನಾ ಸಿಂಧೂರ ಮೇಲೆ ಕ್ರೇಜ್ ಆಗಿದ್ರಂತೆ.

ಯಾಕಂದ್ರೆ ಅಂದು ಕ್ಯಾಟ್ ಸಲ್ಮಾನ್ ಖಾನ್ ಜತೆಗೆ ಡೇಟಿಂಗ್ ನಡೆಸುತ್ತಿದ್ದರು. ಕತ್ರೀನಾ ಸಲ್ಮಾನ್ ಖಾನ್‌ರನ್ನು ಮದುವೆಯಾಗಿದ್ದಾರೆ ಎಂದು ಎಲ್ಲರು ಮಾತನಾಡಿಕೊಂಡಿದ್ದರು. ಈ ವೇಳೆ ಸ್ಪಷ್ಟನೆ ನೀಡಿದ್ದ ಕತ್ರೀನಾ ನನ್ನ ಫ್ರೆಂಡ್ ಮನೆಯಲ್ಲಿ ಪೂಜೆ ಇತ್ತು. ಆದ್ದರಿಂದ ನನ್ನ ಹಣೆಗೆ ಸಿಂಧೂರವಿಟ್ಟಿದ್ದೆ ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು. 
 
ಆದ್ರೆ ಇದೀಗ ರಿಲ್ ಲೈಫಲ್ಲಿ 'ಕಾಲಾ ಚಸ್ಮಾ' ಚಿತ್ರದಲ್ಲಿ ಕತ್ರೀನಾ ಒಂದು ಹಾಡಿನಲ್ಲಿ ಸಿಂಧೂರ ಇಡುವುದರ ಮೂಲಕ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ