ಯಶ್ ಇಲ್ಲದೇ ಕೆಜಿಎಫ್ ಸಿನಿಮಾದ ಶೂಟಿಂಗ್ ಆರಂಭ

ಶುಕ್ರವಾರ, 17 ಜೂನ್ 2016 (12:11 IST)
ನಟ ಯಶ್ ಅವರು ಅಭಿನಯಿಸುತ್ತಿರುವ ಮುಂದಿನ ಸಿನಿಮಾ ಕೆಜಿಎಫ್. ಮೊನ್ನೆ ಮೊನ್ನೆ ಈ ಸಿನಿಮಾದ ಮುಹೂರ್ತ ನಡೆದಿತ್ತು. ಇದೀಗ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಸಿನಿಮಾದ ಶೂಟಿಂಗ್ ಆರಂಭವಾಗುತ್ತಿದ್ರೂ ಯಶ್ ಮಾತ್ರ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲವಂತೆ. ಯಶ್ ಅವರು ಇಲ್ಲದೆಯೇ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆಯಂತೆ.
ಅಂದ್ಹಾಗೆ ಕೆಜಿಫ್ ಸಿನಿಮಾ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದ ಶೂಟಿಂಗ್ ಕೆಲವೇ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಆರಂಭವಾಗಲಿದೆಯಂತೆ.ಅಂದ್ಹಾಗೆ ಈ 15 ದಿನಗಳಲ್ಲಿ ಸಿನಿಮಾದಲ್ಲಿ ಯಶ್ ಅವರನ್ನು ಹೊರತಾಗಿ ಇರುವಂತಹ ಸೀನ್ ಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆಯಂತೆ. ಅಂದ್ಹಾಗೆ ಈ ಚಿತ್ರೀಕರಣದಲ್ಲಿ ಹೊಸ ಕಲಾವಿದರೇ ಭಾಗವಹಿಸುತ್ತಿದ್ದಾರಂತೆ.
 
ಇನ್ನು  ಯಶ್ ಅವರು 30 ರಿಂದ 45 ದಿನಗಳ ಕಾಲ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.ಆದ್ರೆ ಸದ್ಯ ನಡೆಯುತ್ತಿರುವ ಚಿತ್ರೀಕರಣದಲ್ಲಿ ಯಶ್ ಅವರು ಭಾಗವಹಿಸುತ್ತಿಲ್ಲ. ಅವರು ಸಂತತು ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋದರಿಂದ ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸುತ್ತಿಲ್ಲ.
 
 ಇನ್ನು ಸಿನಿಮಾಗಾಗಿ 1970 ರ ಮಾದರಿಯ ಸಿನಿಮಾ ಸೆಟ್ ನನ್ನ ನಿರ್ಮಾಣ ಮಾಡಲಾಗುತ್ತಿದೆಯಂತೆ. ಆಗಸ್ಟ್ ವೇಳೆಗೆ ಈ ಸೆಟ್ ರೆಡಿಯಾಗಲಿದೆಯಂತೆ.ಆ ಬಳಿಕ ಯಶ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಉಗ್ರಂ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ