ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

Sampriya

ಶುಕ್ರವಾರ, 31 ಅಕ್ಟೋಬರ್ 2025 (19:47 IST)
Photo Credit X
ನವದೆಹಲಿ: ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗುರುವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ತಮ್ಮ ತಾಯಿ ಸುನಂದಾ ಶೆಟ್ಟಿ ಅವರನ್ನು  ದಾಖಲಿಸಿದ ನಂತರ ಇಂದು ಶಿಲ್ಪಾ ಶೆಟ್ಟಿ ಕಾಣಿಸಿಕೊಂಡರು. 

ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿ ಕಳವಳಗೊಂಡಿರುವುದು ಗೋಚರಿಸಿತು.
ನಟಿಯ ಆಪ್ತ ಮೂಲಗಳ ಪ್ರಕಾರ, "ವಯೋಸಹಜ ಸಮಸ್ಯೆಗಳಿಂದಾಗಿ ಸುನಂದಾ ಶೆಟ್ಟಿ ಅವರನ್ನು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು."
   

ರೂ 60 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ತಡೆಹಿಡಿಯಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ನಂತರ ಇದೀಗ ಈ ಬೆಳವಣಿಗೆಯಾಗಿದೆ. ಸುನಂದಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿಯಿದೆ. 

ವಿದೇಶಕ್ಕೆ ಪ್ರಯಾಣಿಸುವ ಮುನ್ನ ₹60 ಕೋಟಿ ಠೇವಣಿ ಇಡುವಂತೆ ಶಿಲ್ಪಾ ಮತ್ತು ರಾಜ್ ಕುಂದ್ರಾಗೆ ಬಾಂಬೆ ಹೈಕೋರ್ಟ್ ಆದೇಶ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ