ಅಭಿನವ ಚಕ್ರವರ್ತಿ ಸುದೀಪ್ ನಿನ್ನೆ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜೆಪಿ ನಗರದ ಸುದೀಪ್ ಮನೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಇದೇ ವೇಳೆ ತಮ್ಮ ಕೈಯಾರ ಸುದೀಪ್ ಕೇಕ್ ಕಟ್ ಕೂಡ ಮಾಡಿದ್ರು. ವಿಶೇಷವೆಂದರೆ ಸುದೀಪ್ ಅಭಿಮಾನಿಯೊಬ್ಬ ರಕ್ತದಿಂದ ಪತ್ರ ಬರೆಯುವ ಮೂಲಕ ಅಭಿಮಾನ ಮೆರೆದಿದ್ದಾನೆ.