ಭಾರತಕ್ಕೆ ಬರಲಿದ್ದಾರೆ ಬ್ರಿಟನ್ ರಾಜಮನೆತನದ ದಂಪತಿ ವಿಲಿಯಮ್-ಕೇಟ್ ?

ಸೋಮವಾರ, 4 ಏಪ್ರಿಲ್ 2016 (17:48 IST)
ಬ್ರಿಟನ್ ರಾಜಮನೆತನದ ದಂಪತಿ ವಿಲಿಯಮ್ ಹಾಗೂ ಕೇಟ್  ಭಾರತಕ್ಕೆ ಆಗಮಿಸಲಿದ್ದಾರಂತೆ.! ಈ ಹಿನ್ನೆಲೆಯಲ್ಲಿ ವಿಲಿಯಮ್ಸ್ ಹಾಗೂ ಕೇಟ್ ವೆಲಕಮ್ ಮಾಡಲು ಕಿಂಗ್ ಖಾನ್ ಶಾರೂಖ್ , ನಟಿ ಐಶ್ವರ್ಯ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. 


ಕಿಂಗ್ ಖಾನ್‌ ಶಾರೂಖ್ ಖಾನ್ ಪ್ರಿನ್ಸ್ ವಿಲಿಯಮ್ -ಕೇಟ್  ಅವರನ್ನು ವೆಲಕಮ್ ಮಾಡಲಿದ್ದಾರೆ.. ಆದರೆ ಭಾರತಕ್ಕೆ ಯಾವಾಗ ಬರಲಿದ್ದಾರೆ ಎಬುವುದರ ಬಗ್ಗೆ ಮಾಹಿತಿ ಇಲ್ಲ. ಕೆಲ ದಿನಗಳಲ್ಲೇ ಭಾರತಕ್ಕೆ ರಾಜ ದಂಪತಿ ಆಗಮಿಸಲಿದ್ದಾರೆ ಎಂದು ಹೇಳಲಾಗ್ತಿದೆ. 
 
ಬ್ರಿಟನ್ ರಾಜಮನೆತನದ ದಂಪತಿ ವಿಲಿಯಮ್ಸ್ ಮತ್ತು ಕೇಟ್ ದಂಪತಿ ಮುಂಬೈನ ತಾಜ ಮಹೆಲ್ ಹೋಟೆಲ್‌ಗೆ ಬರಲಿದ್ದಾರೆ. ಅದಾದ ಬಳಿಕ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿಕೆ ನೀಡಲಿದ್ದಾರೆ. 
 
ರಾಯಲ್ ಕಪಲ್ಸ್‌ಗಾಗಿ ಮಿಲಿಯನ್ ಜನರು ಕಾಯುತ್ತಿದ್ದಾರೆ. ಆದರೆ ವಿಲಿಯಮ್ ಮತ್ತು ಕೇಟ್ ಬರತ್ತಾರಾ ?ಎಂದು ಕಾದು ನೋಡಬೇಕು.
 
 

ವೆಬ್ದುನಿಯಾವನ್ನು ಓದಿ