ಗಾಯಕ ಕೆಕೆ ಮರಣೋತ್ತರ ವರದಿ ಬಹಿರಂಗ: ಇಂದು ಅಂತ್ಯಕ್ರಿಯೆ
ಕೆಕೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪ್ರಕಾರ ತೀವ್ರ ಹೃದಯಾಘಾತದಿಂದಾಗಿ ಸಂಭವಿಸಿದ ಸಾವಾಗಿದೆ. ಸಾವಿನಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೆಕೆ ಮುಖ ಮತ್ತು ತಲೆಯ ಭಾಗದಲ್ಲಿ ಗಾಯಗಳಾಗಿದ್ದರಿಂದ ಪೊಲೀಸರು ಇದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನು, ನಿನ್ನೆ ಪಶ್ಚಿಮ ಬಂಗಾಲ ಸರ್ಕಾರದ ವತಿಯಿಂದ ಕೆಕೆಗೆ ಗೌರವ ವಿದಾಯ ಸಲ್ಲಿಸಲಾಗಿದೆ. ಇಂದು ಅವರ ಅಂತ್ಯಕ್ರಿಯೆ ಮುಂಬೈನ ವರ್ಸೋವಾ ಚಿತಾಗಾರದಲ್ಲಿ ನೆರವೇರಲಿದೆ.