ಈ ಕಾರ್ಯಕ್ರಮದಲ್ಲಿ ಕೆಲವೊಂದು ಕುತೂಹಲಕರವಾದ ಸಂಗತಿಗಳನ್ನು ಹೊರಗೆ ಹಾಕಿದ್ದಾರೆ ಪ್ರಿಯಾಂಕಾ. ತಾನು ಫೋನ್ ಸೆಕ್ಸ್ ಮಾಡುತ್ತಿದೆ ಎಂದಿದ್ದಾರೆ. ಅಂದರೆ ಫೋನ್ ಸಂಭಾಷಣೆ ಮೂಲಕ ಶೃಂಗಾರದಲ್ಲಿ ತೊಡಗುವುದು. ಯುವಕರಲ್ಲಿ ಜನಪ್ರಿಯವಾದ ಈ ರೀತಿಯ ಸೆಕ್ಸ್ ತನಗೆ ಅಭ್ಯಾಸ ಇದೆ ಎಂದೂ. ತನ್ನ ಮಾಜಿ ಗೆಳೆಯ ಚುಂಬಿಸಿದ ಸಂದರ್ಭ, ತನ್ನ ಪಾರ್ಟನರ್ ಜತೆಗೆ ಸ್ನಾನ ಮಾಡಿದ್ದನ್ನು ಹೇಳಿಕೊಂಡಿದ್ದಾರೆ ಪ್ರಿಯಾಂಕಾ.
"ನೀನು ಯಾವತ್ತಾದರೂ ಫೋನ್ ಸೆಕ್ಸ್ ಮಾಡಿದ್ದೀಯಾ?" ಎಂದು ಕೇಳಿದ್ದಕ್ಕೆ ಕರಣ್ ಜೋಹಾರ್. ಕೂಡಲೆ ಏನೊಂದು ಆಲೋಚಿಸದೆ ಕಾಫಿ ಹೀರಿದ್ದಾರೆ ಪ್ರಿಯಾಂಕಾ. ಈ ಕಾರ್ಯಕ್ರಮ ನಮ್ಮ ತಾಯಿ ನೋಡದೆ ಇದ್ದರೆ ಒಳ್ಳೆಯದು ಎಂದಿರುವ ಅವರು, ತಮ್ಮ ಖಾಸಗಿ ವಿಚಾರಗಳನ್ನು ಸಾಕಷ್ಟು ಹಂಚಿಕೊಂಡಿದ್ದಾರೆ.