'ಕೃತಿ' ಕಿರುಚಿತ್ರವನ್ನು ವೀಕ್ಷಣೆ ಮಾಡಿದ 3 ಮಿಲಿಯನ್ ಜನರು...

ಸೋಮವಾರ, 18 ಜುಲೈ 2016 (14:38 IST)
ಯೂ ಟೂಬ್‌ಲ್ಲಿ  ಕೃತಿ ಸಿನಿಮಾ ಅತಿ ಹೆಚ್ಚು ನೋಡುಗರರನ್ನು ಸೆಳೆಯುವಲ್ಲಿ ಸಫಲವಾಗಿದೆ. ಶಿರಿಷ್ ಕುಂದರ್ ನಿರ್ದೇಶನದ ಕೃತಿ ಸಿನಿಮಾವನ್ನು ಯೂ ಟೂಬ್‌ಲ್ಲಿ ಮೂರು ಮಿಲಿಯನ್ ವೀಕ್ಷಿಸಿದ್ದಾರೆ. ಕಾಪಿರೈಟ್ ಬಗ್ಗೆ ಸಾಕಷ್ಟು ವಿವಾದ ಮಾಡಿದ್ದ ಕೃತಿ ಸಿನಿಮಾ ಮತ್ತೆ ಕಮ್ ಬ್ಯಾಕ್ ಮೂಲಕ ಸಂತಸ ವ್ಯಕ್ತಪಡಿಸಿದೆ. 

 
'ಕೃತಿ' ಕಿರುಚಿತ್ರ ಮೂರು ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ. ಸತ್ಯ ಹೊರಬರಲು ವಿಳಂಬವಾಗಿದೆ. ಆದ್ರೆ ಸತ್ಯವನ್ನು ನಿಲ್ಲಿಸಲಾಗುವುದಿಲ್ಲ ಎಂದು ನಿರ್ಪಾಪಕ ಶಿರೀಷ್ ಕುಂದರ್ ಟ್ವಿಟ್ ಮೂಲಕ ಉತ್ತರ ನೀಡಿದ್ದಾರೆ. 
 
ನೇಪಾಳಿ ಚಿತ್ರ ನಿರ್ಮಾಪಕರೊಬ್ಬರು 'ಕೃತಿ' ಸಿನಿಮಾದ ಕಥೆಯನ್ನು ಕದಿಯಲಾಗಿದೆ ಎಂದು ಆರೋಪ ಮಾಡಿದ್ದರು. ಈ ಸಂಬಂಧ ಕುಂದರ್  ಲೀಗಲ್ ಬ್ಯಾಟಲ್ ಕೂಡ ಮಾಡಿದ್ದರು. 
 
ಈ ಚಿತ್ರದಲ್ಲಿ ಮನೋಜ್ ಬಾಜ್ಪೇಯಿ, ನೇಹಾ ಶರ್ಮಾ, ಹಾಗೂ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದರು. ಸಿನಿಮಾದ ಬಗ್ಗೆ ಆರೋಪ ಸುಳ್ಳಾಗಿತ್ತು ಎನ್ನಲಾಗಿದೆ.ನೇಪಾಳಿ ಚಿತ್ರ ನಿರ್ಪಾಕರು ಸೂಕ್ತ ದಾಖಲೆಗಳನ್ನು ನೀಡುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಮತ್ತೆ ಯೂ ಟೂಬ್ ಮೂಲಕ ಕೃತಿ ಚಿತ್ರ ಸದ್ದು ಮಾಡುತ್ತಿದೆ. 
 
ಕೃತಿ ಚಿತ್ರ ನಮೆಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು. ಯೂ ಟೂಬ್ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿರುವುದು ಸಂತಸದ ವಿಷಯ ಎಂದು ಮೂವೀಸ್ ಡಾಟ್ ಕಾಮ್‌ನ ನಿರ್ಮಾಪಕ ಪಿಯೂಷ್ ಸಿಂಗ್ ತಿಳಿಸಿದ್ದಾರೆ. ಕಿರುಚಿತ್ರವಾಗಿರುವ 'ಕೃತಿ' ಸಿನಿಮಾ ಜೂನ್ 22ಕ್ಕೆ ರಿಲೀಸ್ ಕಂಡಿತ್ತು. ಯೂ ಟೂಬ್‌ಲ್ಲಿ ಚಿತ್ರವನ್ನು ಹಲವರು ವೀಕ್ಷಿಸುತ್ತಿದ್ದಾರೆ. ಗ್ಲೋಬಲ್ ಮಟ್ಟದಲ್ಲಿ ಕೃತಿ ಕಿರುಚಿತ್ರ ಹೆಸರು ಮಾಡಿದ್ದು, ಬ್ರೇಜಿಲ್,ಪೋಲ್ಯಾಂಡ್, ಈಜಿಪ್ತ್, ಇಸ್ರೇಲ್ ಹಾಗೂ ಹಲವು ದೇಶಗಳ ಜನರು ಚಿತ್ರವನ್ನು ಲೈಕ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ