ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದ ಕೃತಿ ಕರಬಂಧ

ಶುಕ್ರವಾರ, 27 ನವೆಂಬರ್ 2015 (10:32 IST)
ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ದಿಲ್ ಕದ್ದಿದ್ದ ನಟಿ ಕೃತಿ ಕರಬಂಧ ಸದ್ಯ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ, ಸದ್ವೇ ಕೃತಿ ಮುಂಬೈಗೆ ಹಾರಲಿದ್ದಾರೆ. ಯಾಕೆ ಅಂತಾ ಯೋಚಿಸುತ್ತಿದ್ದೀರಾ ಕೃತಿಗೆ ಬಾಲಿವುಡ್ ಸಿನಿಮಾವೊಂದರಲ್ಲಿ ಅಭಿನಯಿಸುವ ಅವಕಾಶ ಕೂಡಿ ಬಂದಿದೆ.

ಮೊನ್ನೆಯಷ್ಟೇ ತಮಿಳಿನ ತಮ್ಮ ಮೊದಲ ಸಿನಿಮಾ ಬ್ರೂಸ್ ಲೀಯ ಶೂಟಿಂಗ್ ನಲ್ಲಿ ಪಾಲ್ಗೊಂಡ ಖುಷಿಯಲ್ಲಿರುವ ಕೃತಿ ಇನ್ನು ಕೆಲವೇ ದಿನಗಳಲ್ಲಿ  ಬಾಲಿವುಡ್ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ. ಅಂದ್ಹಾಗೆ ಜನವರಿಯಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆಯಂತೆ. ಅಂದ್ಹಾಗೆ ಸಿನಿಮಾದ ಹೆಸರು ರಾಜ್ ರಿಬೂತ್. ಈ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಕೃತಿಗೆ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿ ಅಂತೆ. ನಿರ್ದೇಶಕ ಮುಖೇಶ್ ಭಟ್ ಬೇರೊಂದು ಸಿನಿಮಾಗಾಗಿ ಕೃತಿ ಅವರನ್ನು ದೂರವಾಣಿ ಮೂಲಕ ವಿಚಾರಿಸಿದ್ರಂತೆ. ಬಳಿಕ ರಾಜ್ ಸಿನಿಮಾದಲ್ಲಿ ಅಭಿನಯಿಸಲು ತಿಳಿಸಿದ್ರಂತೆ.ಮೊದಲಿಗೆ ಕೃತಿಗೆ ಏನ್ ಹೇಳಬೇಕು ಅಂತಾ ಗೊತ್ತಾಗಲಿಲ್ಲವಂತೆ. ಬಳಿಕ ಸಿನಿಮಾದ ಕಥೆ ಕೇಳಿ ತುಂಬಾ ಖುಷಿಯಾಗಿ ಒಪ್ಪಿಕೊಂಡ್ರಂತೆ.
 
ಸಿನಿಮಾದಲ್ಲಿ ಕೃತಿ ಅವರದ್ದು ತುಂಬಾನೇ ಚೆನ್ನಾಗಿರುವ ಪಾತ್ರವಂತೆ. ತುಂಬಾ ಸರಳವಾದ ಪಾತ್ರವಾದರೂ ಬೇರೆ ಬೇರೆ ಶೇಡ್‌ಗಳಲ್ಲಿ ಕೃತಿ ಮಿಂಚಲಿದ್ದಾರೆ.ಇನ್ನು ಸಿನಿಮಾಕ್ಕೆ ಸಹಿ ಮಾಡುವ ದಿನ ಕೃತಿ ಜ್ವರದಿಂದ ಬಳಲುತ್ತಿದ್ದರಂತೆ.ಆದ್ರೆ ಸಿನಿಮಾ ತಂಡ ಇದೇ ದಿನ ಸಹಿ ಮಾಡಲು ಒಳ್ಳೆಯದು ಅಂದಿದ್ದರಿಂದ ಅದೇ ದಿನ ಸಹಿ ಮಾಡಿದ್ರೆಂತೆ. ಸಿನಿಮಾದ ಬಗ್ಗೆ ಕೃತಿಗೆ ತುಂಬಾನೇ ನಿರೀಕ್ಷೆಗಳಿವೆಯಂತೆ.

ವೆಬ್ದುನಿಯಾವನ್ನು ಓದಿ