ಅಂತರ್ಜಾಲದಲ್ಲಿ ವೈರಲ್ ಆದ ಹೀರೋಯಿನ್ ಡ್ರೆಸ್

ಬುಧವಾರ, 14 ಡಿಸೆಂಬರ್ 2016 (08:35 IST)
ಟಾಲಿವುಡ್‍ನಿಂದ ಬಾಲಿವುಡ್‍ಗೆ ಅಡಿಯಿಟ್ಟ ಹೀರೋಯಿನ್ ಕೃತಿ ಸನನ್ ಇದೀಗ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಬ್ಯೂಟಿ ಹಾಕಿಕೊಂಡ ಗೌನು ಈಗ ಪ್ರಮುಖ ಆಕರ್ಷಣೆಯಾಗಿದೆ. 
 
ಕೇಂದ್ರ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ರು. 2,000 ಹೊಸ ನೋಟು ಬಳಸಿ ವಿನ್ಯಾಸ ಮಾಡಿರುವ ಗೌನು ಧರಿಸಿರುವ ಕೃತಿ ಸನನ್ ಫೋಟೋ ಈಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. 
 
ಸಾಮಾನ್ಯವಾಗಿ ಹೀರೋಯಿನ್‌ಗಳು ತಮ್ಮ ಡಿಸೈನಲ್‌ಗಳಿಗೆ ಹೇಳಿ ಚಿತ್ರಗಳಿಗಾಗಿ, ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಡ್ರೆಸ್ ಡಿಸೈನ್ ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ ಕೃತಿ ಮಾತ್ರ ವಿಶೇಷ ವಿನ್ಯಾಸದ ಈ ಡ್ರೆಸನ್ನು ಯಾರ ಬಳಿ ಡಿಸೈನ್ ಮಾಡಿಸಿಕೊಂಡರೋ ಏನೋ?
 
ಹಣಕ್ಕಾಗಿ ಜನ ಎಟಿಎಂಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಆದರೆ ಕೃತಿ ಮಾತ್ರ ರೂ. 2,000 ನೋಟುಗಳಲ್ಲಿ ಮಿಂಚುತ್ತಿದ್ದಾರೆ. ಕೆಲವರಂತೂ ಈ ಫೋಟೋ ಸಹಜವಾಗಿದ್ದರೂ, ನಂಬುವುದು ಕಷ್ಟ ಎನ್ನುತ್ತಿದ್ದಾರೆ. ಇದನ್ನು ಮಾರ್ಫಿಂಗ್ ಮಾಡಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.
 
ಫೋಟೋ ನೋಡುತ್ತಿದ್ದರೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾದಂತಿದೆ. ಏನೇ ಆದರೂ ಬಿಟ್ಟಿ ಪ್ರಚಾರವಂತೂ ಸಿಗುತ್ತಿದೆ. ಅವರ ಅಭಿನಯಿಸಿದ ಸಿನಿಮಾಗಳಂತೂ ಓಡಲಿಲ್ಲ. ಹೋಗ್ಲಿ ಬಿಡಿ ಈ ಫೋಟೋನಾದ್ರೂ ಓಡುತ್ತಿದೆಯಲ್ಲಾ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ