ಲೀಡ್ ರೋಲ್ ಕುರಿತು ನನ್ನ ಆದ್ಯತೆ ಇಲ್ಲ- ನವಾಜುದ್ದೀನ್ ಸಿದ್ದಿಕಿ

ಸೋಮವಾರ, 27 ಜೂನ್ 2016 (15:40 IST)
ಲೀಡ್ ರೋಲ್ ಕುರಿತು ನನ್ನ ಆದ್ಯತೆ ಇಲ್ಲ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಿಳಿಸಿದ್ದಾರೆ. ಇತರ ಪಾತ್ರಗಳನ್ನು ಮಾಡಲು ತಾವು ಹ್ಯಾಪಿಯಾಗಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ನವಾಜುದ್ದೀನ್ ಹಲವು ಚಿತ್ರಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಲೀಡ್ ರೋಲ್‌ಗಳ ಬಗ್ಗೆ ಹೆಚ್ಚು ಆದ್ಯತೆ ನೀಡುವುದಿಲ್ಲ ಎಂದಿದ್ದಾರೆ. 
ನಾನು ಸೋಲೋ ಚಿತ್ರಗಳನ್ನು ಮಾಡುತ್ತಿದ್ದೇನೆ. ಆದ್ರೆ ಮುಖ್ಯವಾದದ್ದು ಎಂದ್ರೆ ಸ್ಕ್ರೀಪ್ಟ್ ಚೆನ್ನಾಗಿರಬೇಕು. ನಾನು ಕೇವಲ ಲೀಡ್ ರೋಲ್ ಮಾಡಬೇಕು ಎಂದು ಎದುರು ನೋಡುತ್ತಿಲ್ಲ. ಲೀಡ್ ರೋಲ್ ಮಾಡುವುದರ ಬಗ್ಗೆ ಹೆಚ್ಚಿನ ಆದ್ಯತೆ ವಹಿಸಿಲ್ಲ. ಸ್ಕ್ರೀಪ್ಟ್ ಚೆನ್ನಾಗಿದ್ರೆ ಖಂಡಿತ ಮಾಡುತ್ತೇನೆ. ಇನ್ನೂ ಅವರು ಚಿತ್ರ ರಾಮನ್ ರಾಘವ 2.0 ಇತ್ತೇಚೆಗೆ  ತೆರೆ ಕಂಡಿತ್ತು. 
 
ಹಲವು ನಿರ್ಪಾಪಕರು ನನ್ನ ಜತೆಗೆ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಅಲ್ಲದೇ ನಿಜಕ್ಕೂ ನನಗೆ ಹೆಮ್ಮೆ ಎನ್ನಿಸುತ್ತದೆ ಹಲವು ನಿರ್ಪಾಪಕರು ನಾನು ಮಾಡುವ ಕೆಲಸಕ್ಕಾಗಿ ಹೊಗಳಿದ್ದಾರೆ. ಆದ್ದರಿಂದ ನಾನು ಹೆಚ್ಚು ಕೆಲಸ ಪಡೆಯುತ್ತಿದ್ದೇನೆ. ಆದರೆ ಒಬ್ಬ ಕಲಾವಿದನಾಗಿ ಕೆಲವೊಂದು ಬಾರಿ ಚ್ಯೂಜಿಯಾಗಿರಬೇಕಾಗುತ್ತದೆ. ಸೆಲೆಕ್ಟ್ ಆಗಿ ಕೆಲಸ ಮಾಡಬೇಕಾಗುತ್ತದೆ ಎಂದು ನವಾಜುದ್ದೀನ್ ಸಿದ್ದಿಕಿ ತಿಳಿಸಿದ್ದಾರೆ. 
 
ಸೀರಿಯಲ್ ಕಿಲ್ಲರ್ ಪಾತ್ರದಲ್ಲಿ ರಾಮನ್ ರಾಘವ್ 2.0 ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ತಿಳಿಸಿದ್ದಾರೆ. ಅದಕ್ಕಾಗಿ ತುಂಬಾ ಪ್ರಶಂಸೆಗಳು ಅವರಿಗೆ ವ್ಯಕ್ತವಾಗಿವೆಯಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ