ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿತಾ, ಸೀಮಂತದ ಫೋಟೋ ಹಂಚಿ ಕುಡ್ಲದ ಹುಡುಗಿ ಎಂದ ಗಂಗಾ ಪಾತ್ರದಾರಿ

Sampriya

ಮಂಗಳವಾರ, 15 ಜುಲೈ 2025 (19:03 IST)
Photo Credit X
ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗಂಗಾ ಪಾತ್ರದ ಮೂಲಕ ಮನಗೆದ್ದಿದ್ದ ನಟಿ ಹರ್ಷಿತಾ ಅವರು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ತುಂಬಾನೇ ಆಕ್ಟೀವ್ ಆಗಿರುವ ಹರ್ಷಿತಾ ಅವರು ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದರು. 

ಇದೀಗ ತಮ್ಮ ಸೀಮಂತದ ಫೋಟೋವನ್ನು ಶೇರ್ ಮಾಡಿ, ನಾನು ಕುಡ್ಲದ ಸೊಸೆ ಎಂದು ಬರೆದುಕೊಂಡಿದ್ದಾರೆ. 

ಬರಹಗಾರ ಸಂದೀಪ್ ಆಚಾರ್‌ ಅವರನ್ನು ಮದುವೆಯಾಗಿರುವ ಹರ್ಷಿತಾ ಅವರು ಕಿರುತೆರೆಯಲ್ಲಿ ತಮ್ಮ ನಟನೆ ಮೂಲಕ ಒಳ್ಳೆಯ
ಹೆಸರು ಗಳಿಸಿದ್ದರು. ಕಿರುತೆರೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ವೇಳೆ ಸಂದೀಪ್ ಹಾಗೂ ಹರ್ಷಿತಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮನೆಯವರ ಸಮ್ಮತಿ ಮೇರೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟ ಈ ಜೋಡಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಿಂದ ಹೊರಬಂದ್ಮೇಲೆ ಇನ್ನೂ ಜೀ ಕನ್ನಡದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಅವರು ವಿಶ್ರಾಂತಿಗಾಗಿ ನಟನೆಗೆ ಬ್ರೇಕ್ ನೀಡಿದ್ದಾರೆ. 

ಶೀಘ್ರದಲ್ಲೇ ಮಗುವಿನ ಆಗಮನದ ಖುಷಿಯಲ್ಲಿರುವ ಹರ್ಷಿತಾ ಬೇಬಿ ಬಂಪ್ ಪೋಟೋವನ್ನು ಮಾಡಿಸಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ