ಎಂ.ಎಸ್. ಧೋನಿ ಅನ್ ಟೋಲ್ಡ್ ಸ್ಟೋರಿ ದಾಖಲೆ ಗಳಿಕೆ
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರ ದಾಖಲೆಯ ಗಳಿಕೆ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ವರ್ಷ ಅತೀ ಹೆಚ್ಚು ಹಣ ಬಾಚಿದ ಎರಡನೇ ಚಿತ್ರ ಇದಾಗಿದೆ.
ನೀರಜ್ ಪಾಂಡೆ ನಿರ್ದೇಶನದ ಎಂ.ಎಸ್. ಧೋನಿ ಜೀವನಾಧಾರಿತ ಚಿತ್ರದಲ್ಲಿ ಸುಶಾಂತ್ ಸಿಂಗ್ ಧೋನಿ ಪಾತ್ರ ಮಾಡಿದ್ದರು. ಅವರ ಜತೆಗೆ ದಿಶಾ ಪಟಾನಿ, ಅನುಪಮ್ ಖೇರ್, ಭೂಮಿಕಾ ಚಾವ್ಲಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದರು.