ರಾಜಕೀಯಕ್ಕೆ ಸೇರಲು ಆಸಕ್ತಿ ಇದೆಯೇ ಎಂಬ ಪ್ರಶ್ನೆಗೆ ನಟ ಮಾಧವನ್ ಕೊಟ್ಟ ಉತ್ತರವೇನು..?

ಶನಿವಾರ, 20 ಜನವರಿ 2018 (07:01 IST)
ಮುಂಬೈ : ಇತ್ತಿಚೆಗೆ ಸಿನಿಮಾ ನಟರು ಕೂಡ ರಾಜಕೀಯದ ಬಗ್ಗೆ ಆಸಕ್ತಿ ತೋರುತ್ತಿದ್ದು, ಈ ಬಗ್ಗೆ ಬಾಲಿವುಡ್ ನಟ ಮಾಧವನ್ ಅವರ ಬಳಿ ಕೇಳಿದಾಗ ಅವರು ತನಗೆ ರಾಜಕೀಯಕ್ಕೆ ಸೇರಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

 
ಸೂಪರ್ ಸ್ಟಾರ್ ಗಳಾದ ರಜನೀಕಾಂತ್ ಹಾಗು ಕಮಲ್ ಹಾಸನ್ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಈ ಹಿನ್ನಲೆಯಲ್ಲಿ ಪತ್ರಕರ್ತರು ಮಾಧವನ್ ಅವರ ಬಳಿ ನಿಮಗೂ ರಾಜಕೀಯಕ್ಕೆ ಸೇರಲು ಆಸಕ್ತಿ ಇದೆಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಅವರು ತಾನೊಬ್ಬ ನಟ ಮಾತ್ರ, ನಟಿಸುವುದಷ್ಟೇ ನನ್ನ ಕೆಲಸ. ರಾಜಕೀಯ ಇತ್ಯಾದಿಗಳಲ್ಲಿ ನನಗೆ ಆಸಕ್ತಿಯಿಲ್ಲ. ಇಬ್ಬರು ಮಹಾ ನಟರು ರಾಜಕೀಯ ಸೇರಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ಮೂಲಕ ಜನರ ಸೇವೆ ಮಾಡಲು ನಿರ್ಧರಿಸಿರುವ ಅವರ ತೀರ್ಮಾನ ಒಳ್ಳೆಯದೇ. ಆದರೆ ನನಗೆ ರಾಜಕೀಯ ಸೇರಲು ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ