ಮೈ ಹೂ ನಾ ಸಿನಿಮಾ ಫರ್ಹಾ ಖಾನ್ ನಿರ್ದೇಶನದ ಮೊದಲ ಸಿನಿಮಾ. ವಇಶ್ವ ಸುಂದರಿ ಸುಶ್ಮಿತಾ ಸೇನ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.ಕಾಮಿಡಿ ಡ್ರಾಮಾ ಸಿನಿಮಾವಾಗಿರುವ ಮೈ ಹೂ ನಾ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಇನ್ನು ಸಿನಿಮಾ ರಿಲೀಸ್ ಆಗಿ 12 ವರ್ಷಗಳನ್ನು ಪೂರೈಸಿರೋದಕ್ಕೆ ನಿರ್ದೇಶಕಿ ಫರ್ಹಾ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಫರ್ಹಾ ಸುಶ್ಮಿತಾ ಸೇನ್ ಅವರು ನನ್ನ ಫೆವರೇಟ್ ಹಿರೋಯಿನ್ ಅಂದಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಸಿರುವ ಶಾರುಖ್ ಖಾನ್ ಸ್ನೇಹಿತರೊಂದಿಗೆ ಸಿನಿಮಾ ಮಾಡೋದು ಅತ್ಯಂತ ಖುಷಿಯ ವಿಚಾರ ಅಂತಾ ಹೇಳಿದ್ದಾರೆ.