ಅರ್ಜುನ್ ಕಪೂರ್‌ ಜತೆಗಿನ ಬ್ರೇಕಪ್ ಬಳಿಕ 51ನೇ ವಯಸ್ಸಿನಲ್ಲಿ ಮತ್ತೇ ಪ್ರೀತಿಯಲ್ಲಿ ಬಿದ್ರಾ ಮಲೈಕಾ ಅರೋರಾ

Sampriya

ಸೋಮವಾರ, 31 ಮಾರ್ಚ್ 2025 (14:59 IST)
Photo Courtesy X
ನಟ ಅರ್ಜುನ್ ಕಪೂರ್ ಜತೆಗಿನ ಬ್ರೇಕಪ್ ಬಳಿಕ ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತೇ ಪ್ರೀತಿಯಲ್ಲಿ ಬಿದ್ದಿದ್ದಾರೆಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಪೋಟೋ.  

ಮಲೈಕಾ ಅವರು ನಿನ್ನೆ ಗುವಾಹಟಿಯ ಬರಾಸ್ಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2025 ಪಂದ್ಯದ ವೇಳೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಚಿಯರ್ ಮಾಡುತ್ತಾ ಕಾಣಿಸಿಕೊಂಡರು. ಮತ್ತೇ ಡೇಟಿಂಗ್ ವದಂತಿಗೆ ಕಾರಣವಾಗಿರುವುದು ಮಾಜಿ ಕ್ರಿಕೆಟಿಗ ಮತ್ತು ಮಾಜಿ ಆರ್‌ಆರ್ ಕೋಚ್ ಕುಮಾರ್ ಸಂಗಕ್ಕಾರ ಅವರೊಂದಿಗೆ ಮಲೈಕಾ ಪಂದ್ಯಾಟವನ್ನು ಎಂಜಾಯ್ ಮಾಡುತ್ತಿರುವುದು ಇದೀಗ ಡೇಟಿಂಗ್ ವದಂತಿಗೆ ಕಾರಣವಾಗಿದೆ.

ರಾಜಸ್ಥಾನ ರಾಯಲ್ಸ್ ಜೆರ್ಸಿ ಧರಿಸಿದ್ದ ಮಲೈಕಾ ಅವರು ಕ್ರಿಕೆಟ್ ಪಂದ್ಯಾಟವನ್ನು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಈ ಜೋಡಿಯ ವಿಡಿಯೋ ಈಗ ವೈರಲ್ ಆಗಿದ್ದು, ಅಭಿಮಾನಿಗಳು ಈಗಾಗಲೇ ಪತ್ತೇದಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. "ಅವರು ಡೇಟಿಂಗ್ ಮಾಡುತ್ತಿದ್ದಾರೆಯೇ?" ಎಂದು ಕೆಲವರು ಕೇಳಿದರು. ವಾಸ್ತವವಾಗಿ, ಅರ್ಜುನ್ ಕಪೂರ್ ಅವರ ಮಾಜಿ ಗೆಳತಿ ಈಗ ಕುಮಾರ್ ಸಂಗಕ್ಕಾರ ಅವರ ಪ್ರೀತಿಯನ್ನು ಕಂಡುಕೊಂಡಿದ್ದಾರೆಯೇ ಎಂದು ತಿಳಿಯಲು ಅನೇಕರು ಕುತೂಹಲದಿಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ