ವಿಚ್ಛೇದನದ ಜೀವನಾಂಶ ಮೊತ್ತ ರೂ.10 ಕೋಟಿ!

ಬುಧವಾರ, 28 ಡಿಸೆಂಬರ್ 2016 (12:09 IST)
ಬಾಲಿವುಡ್ ನಟ, ನಿರ್ಮಾಪಕ ಅರ್ಬಾಜ್ ಖಾನ್, ಮಲೈಕಾ ಅರೋರಾ ಖಾನ್ ದಾಂಪತ್ಯ ಮುರಿದುಬಿದ್ದಿರುವುದು ಗೊತ್ತೆ ಇದೆ. ಇವರಿಬ್ಬರೂ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವುದು ಗೊತ್ತಿರುವ ವಿಚಾರ. ಈ ಹಿನ್ನೆಲೆಯಲ್ಲಿ ಇಬ್ಬರೂ ಕೌನ್ಸೆಲಿಂಗ್‍ಗೆ ಸಹ ಹಾಜರಾಗಿದ್ದಾರೆ.
 
ಆದರೆ ಮಲೈಕಾ ವಿಚ್ಛೇದನ ಜೀವನಾಂಶವಾಗಿ ರೂ.10-15 ಕೋಟಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. ಅರ್ಬಾಜ್ ಸಹ ಆ ಮೊತ್ತ ಕೊಡಲು ಒಪ್ಪಿದ್ದಾರಂತೆ. ಇವರಿಬ್ಬರ ಪುತ್ರ ಅರ್ಹನ್ ಖಾನ್ ಸದ್ಯಕ್ಕೆ ಮಲೈಕಾ ಬಳಿಯೇ ಇದ್ದಾನೆ. 
 
ಕುಟುಂಬ ಸದಸ್ಯರೆಲ್ಲಾ ಸೇರಿ ಒಟ್ಟಿಗೆ ಬಾಳಿಬದುಕುವಂತೆ ಪ್ರಯತ್ನ ಮಾಡಿದ್ದರು. ಅರ್ಬಾಜ್ ಖಾನ್ ಒಪ್ಪಿದ್ದ. ಆದರೆ ಮಲೈಕಾ ಒಲ್ಲೆ ಎಂದಿದ್ದಾಗಿ ಸುದ್ದಿ ಇದೆ. 1998ರಲ್ಲಿ ಇವರಿಬ್ಬರ ಮದುವೆಯಾಗಿತ್ತು. ಹದಿನೆಂಟು ವರ್ಷಗಳ ದಾಂಪತ್ಯ ವಿಚ್ಛೇದನದ ಮೂಲಕ ಕೊನೆಯಾಗುತ್ತಿದೆ. ಈ ಘಟನೆ ಬಗ್ಗೆ ಅರ್ಬಾಜ್ ಸಹೋದರ ಸಲ್ಮಾನ್ ಖಾನ್ ಹೇಗೆ ಪ್ರತಿಕ್ರಿಯಿಸಬಹುದೆಂದು ಬಾಲಿವುಡ್ ವರ್ಗ ನಿರೀಕ್ಷಿಸುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ