ರಾಷ್ಟ್ರ ಪ್ರಶಸ್ತಿ ಪುರಷ್ಕೃತೆ, ಬಹುಭಾಷಾ ನಟಿ ಕಲ್ಪನಾ ನಿಧನ ಹೊಂದಿದ್ದಾರೆ. ನಟಿ ಊರ್ವಶಿ ಅವರ ಸಹೋದರಿಯಾಗಿರುವ 51 ವರ್ಷದ ಕಲ್ಪನಾ ಸೋಮವಾರ ಮುಂಜಾನೆ ಹೈದರಾಬಾದ್ನ ಹೊಟೇಲ್ವೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಚಿತ್ರ ನಿರ್ದೇಶಕ ಸಿಬಿ ಮಲಾಯಿಲ್ ಮಾಹಿತಿ ನೀಡಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರವೊಂದರ ಚಿತ್ರೀಕರಣದಲ್ಲಿ ಮತ್ತು ಹೈಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಹೈದರಾಬಾದ್ಗೆ ಆಗಮಿಸಿದ್ದ ಅವರು ಹೊಟೆಲ್ ಒಂದರಲ್ಲಿ ತಂಗಿದ್ದರು. ಇಂದು ಮುಂಜಾನೆ ತಾವು ತಂಗಿದ್ದ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂದು ನಿರ್ದೇಶಕ ಮಲಾಯಿಲ್ ತಿಳಿಸಿದ್ದಾರೆ.