ಮುನ್ನಿ ಬದನಾಂ ಹುಯಿ ಮಲೈಕಾ ಈಗ ಫ್ಯಾಷನ್ ಖತಂ ಮುಜ್ಪೆ ಅಂತಿದ್ದಾರೆ!

ಶನಿವಾರ, 27 ಡಿಸೆಂಬರ್ 2014 (10:24 IST)
ಮುನ್ನಿ ಬದನಾಂ ಹುಯಿ ಎನ್ನುವ ಹಾಡಿನ ಮೂಲಕ ಪಡ್ಡೆ ಹುಡುಗರದ್ದು ಮಾತ್ರವಲ್ಲ ಎಲ್ಲ ಗಂಡು ಹಣದು ಹೃದಯಗಳ ಝಲ್ಲೆನಿಸಿದ ನಟಿ ಮಲೈಕಾ  ಅರೋರ ಖಾನ್. ಈಗ ಮತ್ತೊಮ್ಮೆ ತನ್ನ ಮಾಯಾಜಾಲದಿಂದ ಸೆಳೆಯಲು ಸಿದ್ಧ ಆಗಿದ್ದಾರೆ. ಫ್ಯಾಷನ್  ಖತಂ  ಮುಜ್ಪೆ ಎನ್ನುವ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.  
ರಾಜ್ ಕುಮಾರ್ ರಾವ್ ಮತ್ತು ಸೋನಂ ಕಪೂರ್ ಸಹಿತ ಈ ಹಾಡಿನಲ್ಲಿ ಕಂಡು ಬರುತ್ತಿದ್ದಾರೆ. ಸಾಜಿದ್-ವಾಜಿದ್ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿಗೆಂದು ಮಮತಾ ಶರ್ಮ ವಿಶೇಷವಾದ ಹಾಡಿದ ವಿಶೇಷ ಗೀತೆ ಡೋಲಿ ಕಿ ಡೋಲಿ ಚಿತ್ರದಲ್ಲಿದೆ.
 
ಮದುವೆ ದಿನದ ರಾತ್ರಿ ಹುಡುಗರನ್ನು ಮೋಸ ಮಾಡಿ ದೋಚುವ ಒಂದು ಸುಂದರ ಮೋಸಗಾರ್ತಿ ಪಾತ್ರಧಾರಿ ಆಗಿದ್ದಾರೆ ಮಲೈಕ. ಅರ್ಬಾಜ್ ಖಾನ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಅಭಿಷೇಕ್ ಡೋಗ್ರ ಇದರ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಸಂಗೀತದ ಮೂಲಕ  ಸಿದ್ಧವಾಗಿರುವ ಈ ಹಾಡು ನಿಶ್ಚಿತವಾಗಿ ಎಲ್ಲರ ಮನ ಸೆಳೆಯುತ್ತದೆ ಎನ್ನುವ ನಂಬಿಕೆ ತಂಡಕ್ಕಿದೆ.

ವೆಬ್ದುನಿಯಾವನ್ನು ಓದಿ