ಮಧ್ಯರಾತ್ರಿ ಮಂಚಕ್ಕೆ ಕರೀತಾರೆ! ಬಾಲಿವುಡ್ ಟಾಪ್ ಹೀರೋಗಳ ಮುಖವಾಡ ಕಳಚಿದ ಮಲ್ಲಿಕಾ ಶೆರವಾತ್

ಮಂಗಳವಾರ, 2 ಆಗಸ್ಟ್ 2022 (09:40 IST)
ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ನ ಮೋಸ್ಟ್ ವಾಂಟೆಡ್ ನಟಿಯಾಗಿದ್ದ ಮಾದಕ ತಾರೆ ಮಲ್ಲಿಕಾ ಶೆರಾವತ್ ಬಾಲಿವುಡ್ ನ ಟಾಪ್ ಹೀರೋಗಳ ಮುಖವಾಡ ಬಯಲು ಮಾಡಿದ್ದಾರೆ.

ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಂಚ್ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಬಾಲಿವುಡ್ ಟಾಪ್ ಹೀರೋಗಳೇ ಮಧ‍್ಯರಾತ್ರಿ ಮಂಚಕ್ಕೆ ಕರೆಯುತ್ತಾರೆ. ಒಂದು ವೇಳೆ ಅವರ ಬೇಡಿಕೆಗೆ ಒಪ್ಪದೇ ಹೋದರೆ ಮರುದಿನವೇ ಅವರ ಸಿನಿಮಾದಿಂದ ಕಿತ್ತೊಗೆಯುತ್ತಾರೆ ಎಂದು ಮಲ್ಲಿಕಾ ಹೇಳಿದ್ದಾರೆ.

ಯಾವ ನಟಿಯನ್ನು ಕಂಟ್ರೋಲ್ ಮಾಡಬಹುದು,ತಾವು ಹೇಳಿದಂತೆ ಕೇಳುತ್ತಾರೆ, ಅವರನ್ನೇ ತಮ್ಮ ಸಿನಿಮಾಗಳಲ್ಲಿ ಹಾಕಿಕೊಳ್ಳುತ್ತಾರೆ. ಆದರೆ ನನ್ನ ವ್ಯ‍ಕ್ತಿತ್ವ ಅಂತಹದ್ದಲ್ಲ. ನಾನು ಯಾರಿಗೂ ಲೈಂಗಿಕಾಸಕ್ತಿಯ ವಸ್ತುವಾಗಲು ಬಯಸಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ