ಮನೀಷಾ ಕೋಯಿರಾಲಾಗೆ ಈ ಪವರ್‌ ಫುಲ್ ಲೇಡಿಯ ಬಯೋಪಿಕ್‌ ನಲ್ಲಿ ನಟಿಸುವ ಆಸೆಯಂತೆ

ಭಾನುವಾರ, 24 ಜೂನ್ 2018 (07:43 IST)
ಮುಂಬೈ : ಬಾಲಿವುಡ್ ನಟಿ ಮನೀಷಾ ಕೋಯಿರಾಲಾ ಅವರಿಗೆ ದೇಶದ ಗಣ್ಯ ವ್ಯಕ್ತಿ ಪವರ್‌ ಫುಲ್ ಲೇಡಿಯೊಬ್ಬರ ಬಯೋಪಿಕ್‌ ನಲ್ಲಿ ನಟಿಸಬೇಕೆಂಬ ಬಯಕೆ ಇರುವುದಾಗಿ ತಿಳಿಸಿದ್ದಾರೆ.

ಹೌದು ಆ ಪವರ್‌ ಫುಲ್ ಲೇಡಿ ಮತ್ಯಾರು ಅಲ್ಲ. ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ. ಇವರ ಬಯೋಪಿಕ್‌ ನಲ್ಲಿ ನಟಿಸಬೇಕೆಂಬ ಆಸೆಯನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಮನೀಷಾ ಕೋಯಿರಾಲಾ ಅವರು ಹೇಳಿದ್ದಾರೆ. ‘ಆಕೆ ತುಂಬಾ ಶಕ್ತಿಶಾಲಿ ಮಹಿಳೆ. ಮೊದಲ ಮಹಿಳಾ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿದ ಆಕೆ ಅದೆಷ್ಟೋ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಅಷ್ಟೆಲ್ಲಾ ಪವರ್‌ ಫುಲ್ ಲೇಡಿ ಪಾತ್ರದಲ್ಲಿ ನಟಿಸಬೇಕೆಂಬುದೇ ನನ್ನ ಬಯಕೆ. ಅಷ್ಟೇ ಅಲ್ಲದೆ ಈ ಹಿಂದೆ ಇಂದಿರಾಗಾಂಧಿ ಬಯೋಪಿಕ್ ನಲ್ಲಿ ನಟಿಸಲು ಸಹಿ ಮಾಡಿದ್ದ ವಿಷಯವನ್ನೂ ಅವರು ಇನ್ನೊಮ್ಮೆ ಸ್ಮರಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ