ನಾಳೆಯಿಂದ ಮಹಾರಾಷ್ಟ್ರದಲ್ಲಿ ಪಾಲಿಥಿನ್ ಬಳಕೆ ನಿಷೇಧ ; ನಿಯಮ ಮೀರಿದವರಿಗೆ ಏನು ಶಿಕ್ಷೆ ಗೊತ್ತೇ?
ಶುಕ್ರವಾರ, 22 ಜೂನ್ 2018 (15:00 IST)
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ಪಾಲಿಥಿನ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಇನ್ನುಮುಂದೆ ಇದನ್ನು ಬಳಸಿದರೆ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.
ನಾಳೆಯಿಂದಲ್ಲೇ (ಶನಿವಾರ) ಮಹಾರಾಷ್ಟ್ರದಲ್ಲಿ ಈ ಕ್ರಮ ಅನ್ವಯವಾಗಲಿದ್ದು, ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಪಾಲಿಥಿನ್ ನಿಷೇಧ ದೊಡ್ಡ ಪರಿಣಾಮ ಬೀರಲಿದೆ. ಅಂಗಡಿ ಸೇರಿದಂತೆ ಯಾವುದೇ ನಾಗರಿಕನ ಕೈನಲ್ಲಿ ಪಾಲಿಥಿನ್ ಕಂಡು ಬಂದಲ್ಲಿ ಐದು ಸಾವಿರ ರೂಪಾಯಿಯವರೆಗೆ ದಂಡ ವಿಧಿಸಲಾಗುವುದು. ಎರಡನೇ ಬಾರಿ ಸಿಕ್ಕಿಬಿದ್ದಲ್ಲಿ 10 ಸಾವಿರ ಹಾಗೂ ಮೂರನೇ ಬಾರಿ ಸಿಕ್ಕಿಬಿದ್ದಲ್ಲಿ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಜೊತೆಗೆ ಮೂರು ತಿಂಗಳು ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ