ಮಗುವಿಗೆ ಎದೆಹಾಲುಣಿಸುತ್ತಲೇ ಕ್ಯಾಟ್ ವಾಕ್ ಮಾಡಿದ ಮಾಡೆಲ್ ಮಾರಾ ಮಾರ್ಟಿನ್ !

ಬುಧವಾರ, 18 ಜುಲೈ 2018 (11:50 IST)
ಮುಂಬೈ : ಮಾಡೆಲ್ ಮಾರಾ ಮಾರ್ಟಿನ್ ಅವರು ತಾವು ಭಾಗವಹಿಸಿದ್ದ ಫ್ಯಾಷನ್ ಶೋವೊಂದರಲ್ಲಿ ರ್ಯಾಂಪ್ ವಾಕ್ ಮಾಡುವುದರ ಮೂಲಕ ಎಲ್ಲರನ್ನೂ ದಂಗಾಗಿಸಿದ್ದಾರೆ.


ಹೌದು. ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಸ್ವಿಮ್ ಸೂಟ್ ನಿಯತಕಾಲಿಕೆ ಮಿಯಾಮಿ ಸ್ವಿಮ್ ವೀಕ್ ಸ್ಪರ್ಧೆ ನಡೆಸಿದ್ದು, ಇದರಲ್ಲಿ ಆಯ್ಕೆಯಾದ 16 ಮಾಡೆಲ್ ಗಳಲ್ಲಿ ಮಿಚಿಗನ್ ನಿವಾಸಿ ಮಾರ್ಟಿನ್ ಕೂಡ ಒಬ್ಬರು. ಈ ಫ್ಯಾಷನ್ ಶೋನಲ್ಲಿ  ಎಲ್ಲರೂ ರ್ಯಾಂಪ್ ವಾಕ್ ಮಾಡುತ್ತಾ ವಿವಿಧ ರೀತಿಯ ಉಡುಗೆ ತೊಟ್ಟು ನಡೆದಾಡುತ್ತಾರೆ. ಆದರೆ ಮಾಡೆಲ್ ಮಾರಾ ಮಾರ್ಟಿನ್ ಅವರ ರ್ಯಾಂಪ್ ವಾಕ್ ನೋಡಿ ಅಲ್ಲಿದ್ದವರೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ.


ಕಾರಣ 30 ವರ್ಷದ ಮಾಡೆಲ್ ಮಾರಾ ಮಾರ್ಟಿನ್ ಅವರು 5 ತಿಂಗಳ ಮಗುವಿಗೆ ಎದೆಹಾಲು ಉಣಿಸುತ್ತಾ ಬಿಕನಿಯಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ. ಇದು ಎಲ್ಲರ ಮೂಗಿನ ಮೇಲೆ ಬೆರಳಿರಿಸುವಂತೆ ಮಾಡಿದೆ. ಎದೆಹಾಲು ಉಣಿಸುತ್ತಿರುವ ಮಾರ್ಟಿನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಜಗತ್ತಿನ ಸುಂದರ ವಿಷಯ ಇದು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್ ಮಾಡ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ