ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ, ಸಂಜನಾ ಸ್ನೇಹಿತೆರಾದಾಗ

ಶನಿವಾರ, 13 ಆಗಸ್ಟ್ 2016 (14:38 IST)
ಚಂದನವನದಲ್ಲಿ ಇಬ್ಬರ ನಟಿಯರ ಮಧ್ಯೆ ಸ್ನೇಹ ಬೆಳೆಯೋದು ಕಮ್ಮಿ.. ಒಬ್ಬರು ಕಂಡ್ರೆ ಮತ್ತೊಬ್ಬರಿಗೆ ಆಗಿ ಬರಲ್ಲ. ಅದರಲ್ಲೂ ಇಬ್ಬರ ನಟಿಯರ ಬಗ್ಗೆ ಸ್ಪರ್ಧೆ ಏರ್ಪಟ್ಟಿರುತ್ತದೆ. ಅಂಥದ್ರಲ್ಲಿ ನಾವೆಲ್ಲರಿಗಿಂತ ಡಿಫರೆಂಟ್ ಎಂದು ನಟಿ ಪೂಜಾ ಗಾಂಧಿ ಹಾಗೂ ಸಂಜನಾ ಇಬ್ಬರು ತೋರಿಸಿಕೊಟ್ಟಿದ್ದಾರೆ.


ದಂಡುಪಾಳ್ಯ-2 ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ. ಈ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದಾರೆ. ಇನ್ನೂ ವಿಶೇಷ ಪಾತ್ರದಲ್ಲಿ ನಟಿ ಸಂಜನಾ ಕೂಡ ನಟಿಸಿದ್ದಾರೆ. ಈ ವೇಳೆ ಶೂಟಿಂಗ್‌ನಲ್ಲಿ ಇಬ್ಬರು ಭಾಗಿಯಾಗಿದ್ದರು.
 
ಶೂಟಿಂಗ್ ಸೆಟ್‌ನಲ್ಲಿ ಪೂಜಾ ಗಾಂಧಿ ಹಾಗೂ ಸಂಜನಾ ಗಾಂಧಿ ಉತ್ತಮ ಸ್ನೇಹಿತೆಯರಾಗಿದ್ದಾರೆ.. ಪೂಜಾ ಗಾಂಧಿ ಹಾಗೂ ಸಂಜನಾ ಗಾಂಧಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಜತೆ ಜತೆಯಲ್ಲಿ ಊಟ ಕೂಡ ಮಾಡಿದ್ದಾರಂತೆ.
 
ಈ ಕುರಿತು ನಟಿ ಸಂಜನಾ ಟ್ವಿಟರ್‌ನಲ್ಲಿ ಫೊಟೋ ಶೇರ್ ಮಾಡಿದ್ದಾರೆ.. ಟ್ವಿಟರ್‌ನಲ್ಲಿ ಪೂಜಾ ಗಾಂಧಿ ಹಾಗೂ ಸಂಜನಾ, ಸೆಟ್ ವೇಳೆ ಪೂಜಾ ಗಾಂಧಿ ಹಾಗೂ ಸಂಜನಾ ಡಿನ್ನರ್‌ಗಾಗಿ ತೆರಳಿದ್ದಾರೆ. ನಾವಿಬ್ಬರು ಉತ್ತಮ ಸ್ನೇಹಿತೆಯರು ಅಂತ ತೋರಿಸಿಕೊಟ್ಟಿದ್ದಾರೆ. ಇಬ್ಬರು ಹಿರೋಯಿನ್‌ಗಳು ಫ್ರೆಂಡ್ ಶಿಪ್ ನೋಡಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ