ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವಾ ಆಪ್ ನೋಡಿದ್ದೀರಾ?

ಶುಕ್ರವಾರ, 16 ಡಿಸೆಂಬರ್ 2016 (10:49 IST)
ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವಾಗೆ ದೇಶದಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಭಾರತದ ಬೆಸ್ಟ್ ಡ್ಯಾನ್ಸರ್, ಡ್ಯಾನ್ಸ್ ಮಾಸ್ಟರ್ ಎಂದೇ ಮುಂಬೈನಲ್ಲೂ ಚಿರಪರಿಚಿತ. ಹಾಗಾಗಿ ಅವರನ್ನು ಇಂಡಿಯನ್ ಮೈಕೇಲ್ ಜಾಕ್ಸನ್ ಅಂತಲೂ ಕರೆಯುತ್ತಾರೆ. 
 
ಚಲನಚಿತ್ರ ನಿರ್ದೇಶಕರಾಗಿ ಬದಲಾದ ಮೇಲೆ ಪ್ರಭುದೇವಾ ಮೇಲಿನ ಕ್ರೇಜ್ ಇನ್ನಷ್ಟು ಬೆಳೆದಿದೆ. ಈಗ ಪ್ರಭುದೇವ ಎಂದರೆ ಒಂದು ಬ್ರಾಂಡ್ ಇದ್ದಂತೆ. ಇದನ್ನೇ ಅವರ ಅಸ್ತ್ರವಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಭುದೇವ ಹೆಸರಲ್ಲಿಒಂದು ಆಪ್ ರಿಲೀಸ್ ಆಗಿದೆ.
 
ಪ್ರಭುದೇವಾ.ಕಾಮ್ ವೆಬ್‍ಸೈಟ್‌ನಿಂದ ಈ ಆಪನ್ನು ಅಭಿಮಾನಿಗಳು ಡೌನ್‍ಲೋಡ್ ಮಾಡಿಕೊಳ್ಳಬಹುದು. ಅವರ ಸಿನಿಮಾದ ಹಾಡು, ಸಿನಿಮಾ ಅಪ್‌ಡೇಟ್ಸ್, ಡ್ಯಾನ್ಸ್ ರಿಹರ್ಸಲ್ಸ್, ಅಪರೂಪದ ಫೋಟೋಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ