ಮೊಹೆಂಜದಾರೋ ಸಿನಿಮಾದ ನಾಯಕಿ ಪೂಜಾ ಹೆಗ್ಡೆಗೆ ಡೆಂಗ್ಯೂ

ಬುಧವಾರ, 27 ಜುಲೈ 2016 (08:47 IST)
ಹೃತಿಕ್ ರೋಷನ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಮೊಹೆಂಜದಾರೋ ಸಿನಿಮಾ ಇನ್ನೇನು ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾ ತಂಡ ಸಿನಿಮಾದ ಭರ್ಜರಿ ಪ್ರಮೋನಲ್ ನಲ್ಲಿ ತೊಡಗಿದೆ. ಹೀಗಿರುವಾಗಲೇ ಸಿನಿಮಾ ನಾಯಕಿ ಪೂಜಾ ಹೆಗ್ಡೆ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದಾರೆ.


ಕಳೆದ ಕೆಲ ದಿನಗಳಿಂದ ಪೂಜಾ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಅವರಿಗೆ ಮೊಹೆಂಜದಾರೋ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯೋಗದಕ್ಕೆ ಸಾಧ್ಯವಾಗುತ್ತಿಲ್ಲವಂತೆ.

ಹೃತಿಕ್ ರೋಷನ್ ಅನವರು ಒಬ್ಬರೇ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ
ತೊಡಗಿಸಿಕೊಂಡಿದ್ದಾರೆ.ಕನ್ನಡಿತಿಯಾಗಿರುವ ಪೂಜಾ ಅವರ ಮೊಹೆಂಜದಾರೋ ಸಿನಿಮಾಕ್ಕೆ ಈಗಾಗಲೇ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಸಿನಿಮಾದ ಟ್ರೇಲರ್ ನೋಡಿದವರೆಲ್ಲಾ ಸಿನಿಮಾದಲ್ಲಿ ಪೂಜಾ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ ಅಂತಾ ಹೇಳುತ್ತಿದ್ದಾರೆ.

ಅಂದ್ಹಾಗೆ ಪೂಜಾ ಮೊದಲಿಗೆ ತಮ್ಮ ಕರಿಯರ್ ಆರಂಭಿಸಿದ್ದು ತಮಿಳು ಚಿತ್ರರಂಗದಲ್ಲಿ. ತಮಿಳಿನಲ್ಲಿ 2012ರಲ್ಲಿ ತೆರೆ ಕಂಡ ಮುಗಮೂಡಿ ಅನ್ನೋ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಅವರು ಕಾಲಿವುಡ್ ಗೆ ಎಂಟ್ರಿ ಕೊಟ್ಟರು.ಬಳಿಕ ತೆಲುಗಿನಲ್ಲಿ ಒಕ ಲೀಲಾ ಕೋಸಮ್ ಹಾಗೂ ಮುಕುದೈನ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ