ಸಮಂತ ಯಾಕೆ ತಾನು ನಟಿಸುವ ದ್ವಿ ಪಾತ್ರಗಳ ಕತೆ ಹೇಳೋಕೆ ಇಷ್ಟ ಪಡ್ತಾ ಇಲ್ಲ...?

ಬುಧವಾರ, 4 ಜೂನ್ 2014 (10:10 IST)
ಸಮಂತ ಕೇವಲ ಗ್ಲಾಮರ್ ಪಾತ್ರಗಳಲ್ಲಿ ಮಾತ್ರ ಈಗ ಎಲ್ಲರ ಗಮನ ಸೆಳೆದಿಲ್ಲ, ಆಕೆ ಮನಂ ಚಿತ್ರದ ಮುಖಾಂತರ ತಾನು ಒಳ್ಳೆಯ ನಟಿ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಆಕೆಯ ನಟನೆಯು ಎಲ್ಲ ಮನ ಗೆದ್ದಿರುವುದು ಸುಳ್ಳಲ್ಲ. ಆ ಮುಖಾಂತರ ಸಮಂತ ಬಾಲಿ ಅತ್ಯುತ್ತಮ ಪಾತ್ರಗಳನ್ನು ಮಾಡಿಸ ಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ನಿರ್ದೇಶಕ ಮತ್ತು ನಿರ್ಮಾಪಕರುಗಳು. 
 
ಸಮಂತ ಸಹ ಇನ್ನು ಮುಂದೆ ಭಿನ್ನ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ . ಅದಕ್ಕೆ ಪೂರಕವಾಗಿ ಆಕೆ ತನ್ನ ಕೆರಿಯರ್ ಸಹ ಬದಲಾಯಿಸಿಕೊಳ್ಳುವತ್ತ ಗಮನ ಹರಿಸಿದ್ದಾಳೆ. ಪ್ರಸ್ತುತ ಈಗಿರುವ ಸಿನಿಮಾಗಳನ್ನು ಹೊರೆತು ಪಡಿಸಿದರೆ ಹೊಸದಾಗಿ ಅವಕಾಶ ದೊರಕುತ್ತಿರುವ ಸಿನಿಮಾಗಳ ವಿಷಯದಲ್ಲಿ ಹೆಚ್ಚು ಚೂಸಿ ಆಗಿದ್ದಾಳೆ. 
 
ಅಭಿನಯಕ್ಕೆ ಅವಕಾಶವಿರುವಂತಹ ಸಿನಿಮಾಗಳಲ್ಲಿ ಮಾತ್ರ ನಟಿಸಲು ಆಕೆ ಸಿದ್ಧ ಆಗುತ್ತಿದ್ದಾಳೆ. ಇತ್ತೀಚೆಗೆ ತಮಿಳಿನಲ್ಲಿ ವಿಕ್ರಮ್ ಜೊತೆ ನಟಿಸಲು ಸಿದ್ಧತೆ ನಡೆಸಿದ್ದಾಳೆ. ಮುರುಗದಾಸ್ ಅವರ ನಿರ್ದೇಶನದ ಈ ಚಿತ್ರವು ಮೇ 26  ರಿಂದ ಆರಂಭ ಆಗಿದೆ. ಇದರಲ್ಲಿ ಸಮಂತ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾಳೆ ಎಂದಿದೆ ಚೆನ್ನೈ ಮಾಧ್ಯಮಗಳು. 
 
ವಿಕ್ರಮ್ ಆಟೋ ಡ್ರೈವರ್ ಪಾತ್ರದಲ್ಲಿ ಕಂಡು ಬರಲಿದ್ದು, ಆತನಿಗೆ ಈ ಇಬ್ಬರು ಸಮಂತ  ಬಗ್ಗೆ ಪ್ರೇಮ ಉಂಟಾಗುತ್ತದೆಯಂತೆ.ಆದರೆ ಈ ಬಗ್ಗೆ ಸಮ್ಮು ಏನು ಹೇಳಿಲ್ಲ, ಸ್ವಲ್ಪ ಕಾಯ್ರಿ ಚಿತ್ರ ಬಂದ ಬಳಿಕ ನೋಡ್ರಿ ಅಂತ ಹೇಳಿದ್ದಾಳೆ. ಈ ಚಿತ್ರದಲ್ಲಿ ಆಕೆಯು ತನ್ನ ನಟನೆಯಿಂದ ಮತ್ತಷ್ಟು ಎತ್ತರಕ್ಕೆ ಏರುವುದು ಖಂಡಿತ ಎನ್ನುವ ಮಾತನ್ನು ತಮಿಳು ಚಿತ್ರಮಂದಿಹೇಳಿದ್ದಾರೆ. ಇದು ನಿಜವಾದರೆ ಪ್ರಿಯಮಣಿ ರೆಕಾರ್ಡ್ ಈಕೆ ತೊಡೆದು ಹಾಕ್ತಾಳೆ ಎಂದಾಯ್ತು !

ವೆಬ್ದುನಿಯಾವನ್ನು ಓದಿ