ಹಾಗೇನಾದರು ಈ ಸುದ್ದಿ ನಿಜವಾದರೆ ಐಟಂ ಸಾಂಗ್ ಪ್ರಿಯರಿಗೆ ಸುಗ್ಗಿಯೋ ಸುಗ್ಗಿ. ಪ್ರಸ್ತುತ ಮಹೇಶ್ ಬಾಬು ಮತ್ತು ಶ್ರೀನು ವೈಟ್ಲ ಕಾಂಬಿನೇಷನ್ ನಲ್ಲಿ ಚಿತ್ರ ತೆರೆ ಏರುತ್ತಿದೆ. ಆ ಚಿತ್ರದಲ್ಲಿ ಶ್ರೀನು ಹಾಡಿಗೆ, ಡ್ಯಾನ್ಸ್ ಗೆ ಅತಿ ಹೆಚ್ಚು ಗಮನ ನೀಡುತ್ತಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಆಗದು ಚಿತ್ರದಲ್ಲಿ ಪಾರ್ವತಿ ಮಿಲ್ಟನ್ ಳನ್ನು ಐಟಂ ನಂಬರ್ ಭಾಗವಾಗಿ ಮಾಡಿಕೊಂಡಿದ್ದರು. ಈಗ ಶ್ರುತಿಯತ್ತ ಇವರ ಚಿತ್ತವಿದೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಓಡಾಡುತ್ತಿದೆ.