ಈ ವರ್ಷದ ಮೋಸ್ಟ್ ವೈರಲ್ ಸೆಲೆಬ್ರಿಟಿ ಯಾರು ಗೊತ್ತಾ?

ಬುಧವಾರ, 28 ಡಿಸೆಂಬರ್ 2016 (13:44 IST)
ಬಹುಶಃ ನಿಮ್ಮ ಮನಸ್ಸಿನಲ್ಲಿ ಹಲವಾರು ಹೆಸರುಗಳು ಹರಿದಾಡಬಹುದು. ಆದರೆ ಅವರ ಹೆಸರು ಕೇಳಿದರೆ ಎಲ್ಲರ ಊಹೆಗಳು ತಲೆಕೆಳಗಾಗುತ್ತವೆ. ಈ ವರ್ಷದ ಮೋಸ್ಟ್ ವೈರಲ್ ಸೆಲೆಬ್ರಿಟಿಯಾಗಿ ಊರ್ವಶಿ ರೌತೇಲಾ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ರಿಲಯನ್ಸ್ ಡಿಜಿಟಲ್ ಎಗ್ಜಿಬಿಟ್ ಟೆಕ್ ಪ್ರಶಸ್ತಿ 2016ರಲ್ಲಿ ಈ ಗೌರವ ಅವರಿಗೆ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಮಿ.ಐರಾವತ ಚಿತ್ರದಲ್ಲಿ ತೆರೆಹಂಚಿಕೊಂಡ ಬೆಡಗಿ ಈಕೆ. 
 
ಯಮಹಾ ಫಾಸಿನೋ ಮಿಸ್ ದಿವಾ-2015 ಮಿಸ್ ಯೂನಿವರ್ಸ್ ಇಂಡಿಯಾ ಮುಕುಟ ದಕ್ಕಿಸಿಕೊಂಡಿರುವ ಊರ್ವಶಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಜುಲೈನಲ್ಲಿ ಬಿಡುಗಡೆಯಾದ ಗ್ರೇಟ್ ಗ್ರಾಂಡ್ ಮಸ್ತಿ ಸಿನಿಮಾ ನಿರೀಕ್ಷಿಸಿದ ಪ್ರಮಾಣದಲ್ಲಿ ಓಡಲಿಲ್ಲ. 
 
ಈ ಸಿನಿಮಾ ರಿಲೀಸ್‌ಗೂ 17 ದಿನಗಳ ಹಿಂದೆಯೇ ಇಂಟರ್‍‌ನೆಟ್‍ನಲ್ಲಿ ಲೀಕ್ ಆಗಿ ರಾದ್ಧಾಂತ ಸೃಷ್ಟಿಸಿತ್ತು. ಪರಿಣಾಮ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಈ ಘಟನೆ ಬಗ್ಗೆ ಊರ್ವಶಿ ಕಣ್ಣೀರಾಕಿದ್ದರು. ಸಿನಿಮಾ ನೋಡಿದವರು ಸೂಪರ್ ಆಕ್ಟಿಂಗ್ ಎಂದಿದ್ದರು. ನನಗೆ ಖುಷಿ ಪಡಬೋಕೋ, ನೋವನುಭವಿಸಬೇಕೋ ಗೊತ್ತಾಗುತ್ತಿಲ್ಲ. ಇದು ಹತ್ಯೆಗೆ ಸಮಾನ ಎಂದು ಕಣ್ಣೀರಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ