ಸಲ್ಮಾನ್ ಖಾನ್ ಗೆ ಇಷ್ಟ ಆದ ಜಾಕ್ವಿಲಿನ್.

ಸೋಮವಾರ, 7 ಜುಲೈ 2014 (10:27 IST)
ಈ ಹೀರೋಗೆ ಯಾರು ಯಾವಾಗ ಇಷ್ಟ ಆಗ್ತಾರೋ   ಗೊತ್ತಿಲ್ಲ. ಇನ್ನು ಅವಿವಾಹಿತರಾಗಿ   ಇರುವ ಈ ಚೆಲುವ ಹರೆಯದ ಹುಡುಗೀರಿಗೆ ಬಾಯ್ ಆಗೇ ಇದ್ದಾರೆ. ಅಂಕಲ್ ಆಗೇ ಇಲ್ಲ. ಈಗ ಹೇಳ್ತಾ ಇರುವ ಸಂಗತಿ ಸಲ್ಮಾನ್ ಖಾನ್ ಅವರಿಗೆ ಸಂಬಂಧಪಟ್ಟಿದ್ದು. ಸಲ್ಮಾನ್ ಖಾನ್ ಬಾಲಿವುಡ್ ನ ಮೋಸ್ಟ್ ವಾಂಟೆಡ್ ಬ್ಯಾಚುಲರ್. ಅವರ ಬದುಕಲ್ಲಿ ಅನೇಕ ಹುಡುಗೀರು ಬಂದು ಹೋಗಿದ್ದಾರೆ. ಪ್ರಸ್ತುತ ಅವರ ಮನ ಸೆಳೆಯುತ್ತಿರುವ ಚೆಲುವೆ ಜಾಕ್ವೆಲಿನ್ ಫರ್ನಾಂಡೀಸ್. ಆಕೆಯ ಬಗ್ಗೆ ಸಿಕ್ಕಾಪಟ್ಟೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ ಸಲ್ಮಾನ್ ಖಾನ್
 
ಕಿಕ್ ಸಿನಿಮಾದಲ್ಲಿ ಈ ಜೋಡಿ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಒಂದು ಹಾಡಲ್ಲಿ ಆಕೆ ತುಂಬಾ ಅದ್ಭುತವಾಗಿ ಇದ್ದಾಳೆ ಎನ್ನುವ ಸಂಗತಿಯನ್ನು ಆತ ಹೇಳಿದ್ದಾರೆ. 48 ರ ಹರೆಯ ಈತ ಗಮನ ಈಗ 28ರ ಹರೆಯದ ಚೆಲುವೆ ಮೇಲೆ ಬಿದ್ದಿದೆ. ಟ್ವಿಟ್ಟರ್ ನಲ್ಲಿ ಸಹಿತ ಆಕೆಯ ಫಾಲೋ ಮಾಡ್ತಾ ಇದ್ದಾರೆ ಸಲ್ಲು ಮಿಯ. 
 
...........ಇನ್ನು ಇದೆ. ಮುಂದೆ ಓದಿ. 
 
 

ಹ್ಯಾಂಗ್ ಒವರ್ ಹಾಡಿನಲ್ಲಿ ಆಕೆ ತುಂಬಾ ಚೆನ್ನಾಗಿ ನಟಿಸಿದ್ದಾಳೆ. ಇನ್ ಸ್ಟೋ _ಗ್ರಾಂ ನಲ್ಲಿ ಆಕೆಯ ಪೋಸ್ಟ್ ಗಳು ಸಕತ್ ಫನ್ನಿಯಾಗಿ ಇದ್ದು ಮನಕ್ಕೆ ಖುಷಿ ಕೊಡುತ್ತದೆ ಎನ್ನುವ ಸಂಗತಿಯನ್ನು ಅವರು ತಿಳಿಸುತ್ತ ಆಕೆಯನ್ನು ಸದ್ಯಕ್ಕೆ ಆಕಾಶಕ್ಕೆ ಏರಿಸಿದ್ದಾರೆ. ದಬಾಂಗ್ ಚಿತ್ರದಲ್ಲಿ ಸಲ್ಲು ಮಿಯಾ ಅವರನ್ನು ಕಂಡಾಗಿನಿಂದ ಜಾಕುಗೂ ಸಹಿತ ಈತನ ಜೊತೆ ನಟಿಸ ಬೇಕು ಎನ್ನುವ ಆಸೆ ಇತ್ತಂತಂತೆ ಅದೀಗ ನನಸಾಗಿದೆ ಎಂದು ಹೇಳಿದ್ದಾರೆ. 
 
ಸಲ್ಮಾನ್ ಖಾನ್ ಅವರು ಖುದ್ದು ಹಾಡಿರುವ ಹ್ಯಾಂಗ್ ಒವರ್ ಹಾಡು ಈಗ ಯು ಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಮೂರು ದಿನಗಳಲ್ಲೇ ಅದು ನಾಲ್ಕು ಸಾವಿರಕ್ಕಿಂತ ಅಧಿಕ ಪ್ರಮಾಣದಲ್ಲಿ ಜನರ ಗಮನ ಸೆಳೆದಿದೆಯಂತೆ. ಈ ಚಿತ್ರ ಜುಲೈ 25 ರಂದು ಬಿಡುಗಡೆ ಆಗಲಿದೆ ಎಂದು ಹೇಳಿದೆ ಚಿತ್ರತಂಡ. 

ವೆಬ್ದುನಿಯಾವನ್ನು ಓದಿ