ಒಂದಾದರು ಖಾನ್ ದ್ವಯರು.. ರಂಜಾನ್ ಇಫ್ತಾರ್ ಇಬ್ಬರನ್ನು ಒಟ್ಟು ಮಾಡಿತು!

ಮಂಗಳವಾರ, 8 ಜುಲೈ 2014 (10:37 IST)
ಮತ್ತೊಮ್ಮೆ ಈ ಹಳೆ ಶತ್ರುಗಳು ಒಂದಾಗಿದ್ದಾರೆ. ಬಾಲಿವುಡ್ ಬಾದ್ಷ ಶಾರೂಖ್ ಖಾನ್ ಮತ್ತು ಸ್ನಾಯು ವೀರ ಸಲ್ಮಾನ್ ಖಾನ್ ಅನೇಕ ಬಾರಿ ಜಗಳಗಳನ್ನು ಮಾಡಿಕೊಂಡು ಮುಖ ತಿರುಗಿಸಿಕೊಂಡಿದ್ದರು. ಆದರೆ ಈಗ ಮತ್ತೆ ಒಂದಾಗಿದ್ದಾರೆ. 2008 ರಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಇವರಿಬ್ಬರ ನಡುವೆ ನಡೆದ ಗಲಾಟೆಯ ಬಳಿಕ ಈ ಜೋಡಿ ಒಬ್ಬರ ಮುಖವನ್ನು ಮತ್ತೊಬ್ಬರು ನೋಡುತ್ತಿರಲಿಲ್ಲ.
 
 ಆದರೆ ಕಳೆದ ವರ್ಷ ರಂಜಾನ್ ಹಬ್ಬದಂದು ಮೊದಲ ಬಾರಿ ಒಟ್ಟಾಗಿ ಸೇರಿ ಎಲ್ಲರ ಗಮನ ಸೆಳೆದಿದ್ದರು. 
ಪುನಃ ಈ  ವರ್ಷ ಮತ್ತೆ ಒಟ್ಟಾಗಿದ್ದಾರೆ ಈ ಜೋಡಿ. ಬಾಂದ್ರ ಹೋಟೆಲ್ ನಲ್ಲಿ ಭಾನುವಾರ ಬಾಬಾ ಸಿದ್ಧಿಖಿ ಏರ್ಪಾಡು ಮಾಡಿದ ಇಫ್ತಾರ್ ಕೂಟದಲ್ಲಿ ಅವರು ಹಾಜರಾದರು. 
 
......ಇನ್ನು ಇದೆ. ಮುಂದೆ ಓದಿ. 
 
 

ಆರಂಭದಲ್ಲಿ ಶಾರೂಖ್ ಖಾನ್ ತಮ್ಮ ಕುಟುಂಬದ ಜೊತೆ ಬಂದರೆ ಸಲ್ಮಾನ್ ಖಾನ್ ಅರ್ಧ ಗಂಟೆ ತಡವಾಗಿ ಅಲ್ಲಿಗೆ ಆಗಮಿಸಿದರು. ಆ ಕಾರ್ಯಕ್ರಮಕ್ಕೆ ತನ್ನ ಸಹೋದರ ಅರ್ಬಾಜ್ ಖಾನ್, ಸೊಹೈಲ್ ಖಾನ್, ಅಪ್ಪ ಸಲೀಮ್ ಖಾನ್ ಜೊತೆ ಈ ಕಾರ್ಯಕ್ರಮಕ್ಕೆ ಬಂದರು. 
 
 ಈ ಪಾರ್ಟಿಗೆ ತಡವಾಗಿ ಬಂಡ ಸಲ್ಮಾನ್ ಕಂಡು ಅಲ್ಲಿದ್ದವರು ನಿಂತು ಸ್ವಾಗತ ಕೋರಿದರು. ಆಗ ಸಲ್ಲೂ ಮಿಯಾ ಅಲ್ಲಿಯೇ ಇದ್ದ ಶಾರೂಖ್ ಖಾನ್ ಬಳಿ ಹೋಗಿ ಅವರನ್ನು ಅಪ್ಪಿಕೊಂಡರು. ಶಾರುಖ್ ಖಾನ್ ಸಹ ವಾತ್ಸಲ್ಯದಿಂದ ಗೆಳೆಯನನ್ನು ಅಪ್ಪಿಕೊಂಡು ಎಲ್ಲರ ಗಮನ ಸೆಳೆದರು. ಕತ್ರಿನ ಕೈಫ್ ಹುಟ್ಟುಹಬ್ಬದ ಸಮಯದಲ್ಲಿ ಇವರಿಬ್ಬರ ನಡುವೆ ಗಲಾಟೆ ಆಗಿತ್ತು. ಅದಾದ ಬಳಿಕ ಈ ಜೋಡಿ ದೂರ ಆಗಿದ್ದರು. 

ವೆಬ್ದುನಿಯಾವನ್ನು ಓದಿ