ದಕ್ಷಿಣ ಭಾರತದಿಂದ ಉತ್ತರ ಭಾರತದ ಕಡೆಗೆ ವಲಸೆ ಹೋದ ನಟಿಯರಲ್ಲಿ ಶ್ರೀದೇವಿ ಸಹ ಒಬ್ಬಾಕಿ. ಆಕೆಯನ್ನು ತೆಲುಗು ಮಂದಿ ಅತಿಲೋಕ ಸುಂದರಿ ಎಂದೇ ಪ್ರೀತಿಯಿಂದ ಕರೆಯೋದು. ಅಷ್ಟೊಂದು ಅಭಿಮಾನ ಆಕೆ ಬಗ್ಗೆ. ಮದುವೆಯ ಮುನ್ನ ಅದಾದ ಬಳಿಕವು ಸಹ ತನ್ನ ಬಗ್ಗೆ ಸ್ಟಾರ್ ಡಂ ಕಡಿಮೆ ಮಾಡಿಕೊಳ್ಳಲೇ ಇಲ್ಲ. ಆದ ಕಾರಣ ಶ್ರೀದೇವಿಯನ್ನು ಕಂಡ್ರೆ ಹಿರಿಯ ಮಾತ್ರವಲ್ಲ ಕಿರಿಯ ನಿರ್ದೇಶಕರಿಗಳಿಗೂ ರವಷ್ಟು ಜಾಸ್ತಿನೇ ಇಷ್ಟ.
ಅದು ಒಂದು ಕಡೆ ಇಡೋಣ , ಆದರೆ ಈಗ ಬಾಲಿವುಡ್ ನಲ್ಲಿ ಹೆಚ್ಚು ಗಮನ ಸೆಳೆದಿರುವ ಸಂಗತಿ ಅಂದ್ರೆ ಶ್ರೀದೇವಿ ಮಗಳು ಜಾನ್ಹವಿ ಬಗ್ಗೆ. ಆಕೆ ಯಾವಾಗ ಚಿತ್ರರಂಗಕ್ಕೆ ಬರ್ತಾಳೆ, ಯಾವ ಹೀರೋ ಜೊತೆ ನಟಿಸ್ತಾಳೆ. ಆಕೆಯ ಮೊದಲ ಚಿತ್ರದ ಮುಹೂರ್ತ ಎಂದು ಹೀಗೆ ಅನೇಕ ರೀತಿಯ ಪ್ರಶ್ನೆಗಳು.
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಶ್ರೀದೇವಿ ಬಳಿ ಆಕೆಯ ಮಗಳ ಡೇಟಿಂಗ್ ಸಂಗತಿ ಯಾರೋ ಕೇಳಿದರಂತೆ , ಇದರಿಂದ ಉರಿದು ಬಿದ್ದ ಆಕೆ ತನ್ನ ಮಗಳು ಇನ್ನು ಓದುತ್ತಿದ್ದಾಳೆ ಅವಳಿಗೆ ಸಿನಿಮಾಕ್ಕೆ ಬರಲು ಸಾಕಷ್ಟು ಕಾಲ ಇದೆ ಎಂದು ಹೇಳಿದ್ದರಂತೆ . ಅಲ್ಲದೆ ಆಕೆ ಯಾರ ಜೊತೆ ಡೇಟಿಂಗ್ ಮಾಡ್ತಾ ಇಲ್ಲ, ಯಾರೋ ಬೇಕೂಂತ ಇಂತಹ ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳುತ್ತಾ ನಿಮಗ್ಯಾಕ್ರಿ ನನ್ನ ಮಗಳ ಉಸಾಬರಿ ಎಂದೂ ಸಹ ಕೇಳಿದರಂತೆ ಶ್ರೀ ಮೇಡಂ.. !