ಅತಿ ಎತ್ತರದ ನಟಿ ಯಾರು ಯಾರು ?

ಬುಧವಾರ, 23 ಜುಲೈ 2014 (09:37 IST)
ಅತಿ ಎತ್ತರವಾದ ನಟಿ ಯಾರು ಎನ್ನುವ ಪ್ರಶ್ನೆಯನ್ನು ಒಂದು ಸರ್ಕಾರಿ ಪರೀಕ್ಷೆಯಲ್ಲಿ ಕೇಳಲಾಗಿತ್ತು. ಇಂತಹ ಪ್ರಶ್ನೆಗಳಿಗೂ ಸಹ ಆದ್ಯತೆ ಇದೆಯೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮಾತ್ರವಲ್ಲ ನಮಗೂ ಮೂಡಿತ್ತು. ಆದರೆ ಸರ್ಕಾರದ ಪರೀಕ್ಷೆಗಳಲ್ಲಿಯೇ  ಇಂತಹ ಪ್ರಶ್ನೆ ಕೇಳಿದರೆ.. ಎಲ್ಲ ಆಗುತ್ತೆ ಬಿಡಿ ಅಂತ ಸುಮ್ಮನೆ ಆಗ್ತೀವಿ. 
 
ಇನ್ನು ಮುಂದೆ  ವಿದ್ಯಾರ್ಥಿಗಳು ಕೇವಲ ಇತಿಹಾಸದ ಬಗ್ಗೆ ಮಾತ್ರವಲ್ಲ ಸಿನಿಮಾಗಳ ಬಗ್ಗೆ ಸಹ ಒಂದು ಗಮನ ನೀಡ ಬೇಕಾಗಿರುವ ಪರಿಸ್ಥಿತಿ ಎದುರುರಾಗಿದೆ. ಏಕೆಂದರೆ  ಕಳೆದ ಭಾನುವಾರ ಕೇರಳದಲ್ಲಿ ನಡೆದ ಎಸ್ ಎಸ್ಸಿ ಕಂಬೈನ್ಡ್  ಗ್ರಾಜುಯೇಟ್ ಪರೀಕ್ಷೆಯಲ್ಲಿ ಕೇಳಿದ ಒಂದು ಪ್ರಶ್ನೆ ಮಾತ್ರ ವಿದ್ಯಾರ್ಥಿಗಳನ್ನು ತಬ್ಬಿಬ್ಬು ಮಾಡಿತಂತೆ!  
 
........ಇನ್ನು ಇದೆ. ಮುಂದೆ ಓದಿ. 
 
 

ಆ ಪರೀಕ್ಷೆಯಲ್ಲಿ ಅತಿ ಎತ್ತರದ ನಟಿ ಯಾರು? ಅದರಲ್ಲಿ ಆಯ್ಕೆ ನೀಡಿದ ಹೆಸರುಗಳಲ್ಲಿ ಹುಮಾ ಖುರೇಷಿ, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಪ್ರೀತಿ ಜಿಂಟ ಹೆಸರು. ಇಂತಹ ಪ್ರಶ್ನೆಗಳನ್ನು ಕಂಡು ಅಲ್ಲಿನ ವಿದ್ಯಾರ್ಥಿಗಳು ತಬ್ಬಿಬ್ಬು ಆಗಿದ್ದಾರೆ. 
 
ಒಬ್ಬ ಹುಡುಗ ಈ ಪ್ರಶ್ನೆಗೆ ಉತ್ತರಿಸುತ್ತ ಎತ್ತರದ ನಟಿ ಪ್ರೀತಿ ಜಿಂಟಾ ಎಂದು ಹೇಳಿದ್ದಲ್ಲದೆ,ಈ ವರೆಗೂ ಮೇಲೆ ಹೇಳಿರುವ ಯಾವ ನಟಿಯನ್ನು ತಾನು ಬಿಕಿನಿಯಲ್ಲಿ ಕಂಡೆ ಇಲ್ಲ. ಆದರೆ  ತನಗೆ ಕತ್ರಿನಾ ರಣಬೀರ್ ಜೊತೆ  ಬೀಚ್ ನಲ್ಲಿ ಇರುವ ಚಿತ್ರಗಳ ಸನ್ನಿವೇಶ ಮಾತ್ರ ನೆನಪಿಗೆ ಬರುತ್ತಿದೆ ಎನ್ನುವ  ಸಂಗತಿ ಹೇಳಿದ್ದಾನೆ. ಅದು ಅವನ ತಪ್ಪಲ್ಲ ಬಿಡಿ ! 

ವೆಬ್ದುನಿಯಾವನ್ನು ಓದಿ