ತಮಿಳು ಚಿತ್ರಗಳಲ್ಲಿ ನಟಿಸಲು ಶ್ರೀದೇವಿ ಸಿದ್ಧ?

ಗುರುವಾರ, 24 ಜುಲೈ 2014 (09:29 IST)
ಬಾಲಿವುಡ್ ನಲ್ಲಿ ಮಹಾರಾಣಿ ಆಗಿದ್ದ ಶ್ರೀದೇವಿ ಆ ಬಳಿಕ ಬೋನಿ ಕಪೂರ್ ಅವರನ್ನು ಮದುವೆ ಆಗಿ ಎರಡು ಹೆಣ್ಣುಮಕ್ಕಳ ತಾಯಿ ಆದರು . ಅದಾಗಿ ಹದಿನೈದು ವರ್ಷಗಳ ನಂತರ ಮತ್ತೊಮ್ಮೆ ಇಂಗ್ಲೀಷ್ ವಿಂಗ್ಲೀಷ್  ಚಿತ್ರದ ಮುಖಾಂತರ  ರೀ ಎಂಟ್ರಿ  ಆದರು. ಈಗ ಬಂದಿರುವ ಸುದ್ದಿ ಏನೆಂದರೆ ಶ್ರೀದೇವಿ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೋ ಲೆಕ್ಕಾಚಾರದ ಪ್ರಕಾರ ಆಕೆ ತಮಿಳಿನಲ್ಲಿ ನಟಿಸಿ 28 ವರ್ಷಗಳಾಗಿವೆ. ಅಂದ್ರೆ ಆ ಮೂಲಕ ಆಕೆ ದೀರ್ಘ ಪ್ರಯಾಣಕ್ಕೆ ಫುಲ್ಸ್ಟಾಪ್ ಇಟ್ಟು ಮತ್ತೆ ತಮಿಳಿನಲ್ಲಿ ನಟಿಸಲು ಸಿದ್ಧ ಆಗಿದ್ದಾರೆ. ವಿಜಯ್ ಅವರ ನಟನೆಯ ಚಿತ್ರದಲ್ಲಿ ಶ್ರೀದೇವಿ ವಿಭಿನ್ನ ಪಾತ್ರದ ಮುಖಾಂತರ ಕಂಡು ಬರುತ್ತಿದ್ದಾರೆ.
 
.......ಇನ್ನು ಇದೆ. ಮುಂದೆ ಓದಿ. 
 
 

ಆ ಚಿತ್ರದಲ್ಲಿ ನಟಿಸಲು ಆಕೆಯ ಕಡೆಯಿಂದ ಸಮ್ಮತಿಮುದ್ರೆ ಸಿಕ್ಕಿದೆಯಂತೆ. ದೃಶ್ಯಂ ಚಿತ್ರದ ತಮಿಳು ಅವತರಣಿಕೆಯಲ್ಲಿ ನಟಿಸಲು ಸಹ ಓಕೆ ಅಂದಿದ್ದಾರೆ ಶ್ರೀದೇವಿ. ಈ ಚಿತ್ರದ ಹೀರೋ ಕಮಲ್ ಹಾಸನ್.
ಈ ಚಿತ್ರದ ಮುಖ್ಯ ಪಾತ್ರವಾಗಿರುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀದೇವಿ ನಟಿಸುವ ಸಾಧ್ಯತೆ ಇದ್ದು, ಚಿತ್ರದ ಕಥೆಯನ್ನು ಆಕೆಯ ಪತಿ ಬೋನಿ ಕಪೂರ್ ಕೇಳಿದ್ದಾರಂತೆ. ಆಕೆ ಈಗ ಚಿತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ತಾರ ಇಲ್ಲವಾ ಎನ್ನುವುದು ಸಹ ಪ್ರಸ್ತುತ ಯಾರಿಗೂ ಗೊತ್ತಿಲ್ಲ, ನಾವು ಇದಕ್ಕೆ ಹೊರತಲ್ಲ! 

ವೆಬ್ದುನಿಯಾವನ್ನು ಓದಿ