ಮಾನವತೆ ಯಿಂದ ರೀಲ್ ಮಾತ್ರವಲ್ಲ ರಿಯಲ್ಲಾಗಿ ಆದರು ಹೀರೋ ಹೃತಿಕ್ ರೋಶನ್

ಗುರುವಾರ, 24 ಜುಲೈ 2014 (09:34 IST)
ಅಗ್ನಿ ಅನಾಹುತದಿಂದ ಮುಂಬೈ ನಲ್ಲಿ ಮರಣಿಸಿದ ಅಧಿಕಾರಿ ಕುಟುಂಬಕ್ಕೆ ಬಾಲಿವುಡ್ ನ ಪ್ರಖ್ಯಾತ ನಟ ಹೃತಿಕ್ ರೋಶನ್ ಸಹಾಯ ಮಾಡಿದ್ದಾರೆ. ಆ ಕುಟುಂಬ ಆಸರೆಯಾಗಿ ನಿಲ್ಲಲು ಅವರು ಮುಂದೆ ಬಂದಿದ್ದಾರೆ. ಸಾಮಾನ್ಯವಾಗಿ ಚಿತ್ರಗಳ ಮುಖಾಂತರ ಒಳ್ಳೆಯತನವನ್ನು ತೋರುವ ಅನೇಕ ಬಣ್ಣದ ಮಂದಿ ನಿಜ ಬದುಕಲ್ಲಿ ನಮ್ಮಂತೆ ಸಾಮಾನ್ಯ ಮನುಷ್ಯರಾಗಿ ಇರುತ್ತಾರೆ.
 
 ಇತ್ತೀಚೆಗೆ ನಡೆದ ಅಗ್ನಿ ಅನಾಹುತದ ಸಮಯದಲ್ಲಿ ಅಲ್ಲಿ ಕರ್ತವ್ಯ ನಿರತವಾಗಿದ್ದ ಅಧಿಕಾರಿ ನಿತಿನ್ ಯೆವ್ಲೆಕರ್  ಕುಟುಂಬಕ್ಕೆ ಹೃತಿಕ್ ಆರ್ಥಿಕ ಸಹಾಯು ಮಾಡುವುದರ ಜೊತೆಗೆ ಆ ಕುಟುಂಬ ಸದಸ್ಯರಿಗೆ ಸಾಂತ್ವನ ನೀಡಿದ್ದಾರೆ ಹೃತಿಕ್. ಕಳೆದ ಶುಕ್ರವಾರ ಅಂಧೇರಿಯಲ್ಲಿ ಇರುವ ಲೋಟಸ್ ಬಿಸಿನೆಸ್ ಪಾರ್ಕ್ ನಲ್ಲಿದ್ದ 22  ಅಂತಸ್ತುಗಳ ಕಟ್ಟದಲ್ಲಿ ಅಗ್ನಿ ಅನಾಹುತ ಆಗಿತ್ತು. . 
 
.........ಇನ್ನು ಇದೆ. ಮುಂದೆ ಓದಿ. 
 
 

ಈ ಕಟ್ಟದಲ್ಲಿ ಹೃತಿಕ್ ಅವರ ಐದು ಪ್ಲೋರ್ ಗಳಿವೆ. ಈ ಅನಾಹುತದಲ್ಲಿ ಅಗ್ನಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿತಿನ್ ಸಾಕಷ್ಟು ಶ್ರಮ ವಹಿಸಿದ್ದರು. ಆದರೆ ಅಂತಿಮವಾಗಿ ಅವರು ಸಾವನ್ನು ಅಪ್ಪುವ ಪರಿಸ್ಥತಿ ಉಂಟಾಗಿತ್ತು. ನಿತಿನ್ ಅವರ ಕುಟುಂಬಕ್ಕೆ 15  ಲಕ್ಷಗಳ ಆರ್ಥಿಕ ಸಹಾಯ ಮಾಡಿರುವುದಾಗಿ ತಿಳಿದು ಬಂದಿದೆ. ಆದರೆ ಮಾಧ್ಯಮದ ಮುಂದೆ ಕೊಟ್ಟ ಬಗ್ಗೆ ಹೇಳಿಲ್ಲ. 
 
ನಮಗೆ ಅಗತ್ಯ ಇರುವಾಗ ಬೇರೆಯವರ ಬಳಿ ಸಹಾಯ ಯಾಚಿಸುವುದು ಸಹಜ. ಅದೇರೀತಿ ನಾವು ಸಹ ಅಗತ್ಯ ಇರುವವರಿಗೆ ಸಹಾಯ ಮಾಡ ಬೇಕು ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ ಹೃತಿಕ್ . 

ವೆಬ್ದುನಿಯಾವನ್ನು ಓದಿ