ಅಮಿತಾಬ್ ಬಚ್ಚನ್ ಅತ್ತಿಗೆಯಾಗಿದ್ದರೆ ಮೌಸಮಿ ಚಟರ್ಜಿ

ಶುಕ್ರವಾರ, 25 ಜುಲೈ 2014 (09:44 IST)
ಹಿಂದಿ ಚಿತ್ರರಂಗದಲ್ಲಿ ಆ ಕಾಲದ ನಟಿಯರಲ್ಲಿ ಮೌಸಮಿ ಚಟರ್ಜಿ ಸಹ ಒಬ್ಬರು. ಅತ್ಯಂತ ರೂಪವಂತ ನಟಿ ಮೌಸಮಿ ತನ್ನ ಅಭಿನಯದಿಂದಲೂ ಸಹ ಎಲ್ಲರ ಗಮನ ಸೆಳೆದ ಪ್ರತಿಭಾವಂತೆ. ಆಕೆ ಹತ್ತು ವರ್ಷಕ್ಕೂ ಅಧಿಕ ಕಾಲ ಹಿಂದಿ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ತೋರಿದ್ದರು. 
 
ಆಕೆ ಹಿಂದಿ ಯಲ್ಲಿ  ನಟಿಸಿದ ಮೊದಲ ಚಿತ್ರ ಅನುರಾಗ್. ಆ ಚಿತ್ರದಲ್ಲಿ ಅಭಿನಯಿಸಿದ ಪರಿಗೆ ಉತ್ತಮ ಪ್ರತಿಕ್ರಿಯೆ ದೊರೆತು ಆಕೆ ಚಿತ್ರರಂಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯ್ತು.   ಸುಮಾರು ಹತ್ತು ವರ್ಷಗಳ ಕಾಲ ಆಕೆ ಹೀರೋಯಿನ್ ಆಗಿದ್ದರು. ಅದಾದ ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. 
 
ಆದರೆ ಇತ್ತೀಚಿಗೆ ಅಲ್ಲೊಂದು ಇಲ್ಲೊಂದು ಅನ್ನುವಂತೆ ಕಂಡು ಬಂದಿದ್ದಾರೆ. ಈಗ ಪೀಕು ಅನ್ನುವ ಸಿನಿಮಾದಲ್ಲಿ ಮತ್ತೆ ನಟಿಸುತ್ತಿದ್ದಾರೆ. 
 
..........ಇನ್ನು ಇದೆ. ಮುಂದೆ ಓದಿ. 
 
 

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾ ಇದ್ದಾರೆ ಸುಜಿತ್ ಸರ್ಕಾರ್. ಅಮಿತಾಬ್ ಬಚ್ಚನ್, ದೀಪಿಕ ಪಡುಕೋಣೆ, ಇರ್ಫಾನ್ ಖಾನ್ ಮುಂತಾದವರು ನಟಿಸುತ್ತಿರುವ ಈ ಚಿತ್ರದಲ್ಲಿ ಮೌಸಮಿ ಅಮಿತಾಬ್ ಅವರ ಅತ್ತಿಗೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 
ಅಮಿತಾಬ್ ಅವರ ಜೊತೆ ಪ್ರೇಯಸಿ, ಹೆಂಡತಿ ಪಾತ್ರಗಳಲ್ಲಿ ನಟಿಸಿದ್ದ ಮೌಸಮಿಯನ್ನು ಈಗ ಅತ್ತಿಗೆ ರೂಪದಲ್ಲಿ ನೋಡುವ ಅವಕಾಶ. 

ವೆಬ್ದುನಿಯಾವನ್ನು ಓದಿ